ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಕ್ರೀದ್ ಹಬ್ಬಕ್ಕೆ ಬಲಿ ಕೊಡಲು ಸಾಗಿಸಲಾಗಿದ್ದ ಹಸುಗಳ ರಕ್ಷಣೆ

ಹೊಸಕೋಟೆ: ಮುಸ್ಲಿಂ ಬಾಂಧವರು ಪವಿತ್ರ ಬಕ್ರೀದ್ ಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ವೇಳೆ ಮಾಂಸ ವ್ಯಾಪಾರಿಗಳು ಅಕ್ರಮವಾಗಿ ಸೂಕ್ತ ದಾಖಲೆಗಳಿಲ್ಲದೆ ಹಸುಗಳನ್ನು ಸಾಗಿಸಿ, ವಧಿಸಿ ಮಾಂಸ ಮಾರಾಟ ಮಾಡಿಕೊಳ್ತಾರೆ. ಈ ಬಗ್ಗೆ ಗೋಗ್ಯಾನ್ ಸಂಸ್ಥೆ ಹೊಸಕೋಟೆಯ ಅನುಗೊಂಡನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿತ್ತು. ಅನುಗೊಂಡನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ಮಠಮಲ್ಲಸಂದ್ರ ಮತ್ತು ಮೇಡಿಮಲ್ಲಸಂದ್ರಗಳಲ್ಲಿ ನಾಳೆ ಬಕ್ರೀದ್ ಹಬ್ಬದ ವ್ಯಾಪಾರಕ್ಕೆ ಹಸುಗಳನ್ನು ತಂದು ಇರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನಲೆ ಹೊಸಕೋಟೆ DYSP ಉಮಾಶಂಕರ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ 6ಕ್ಕು ಹೆಚ್ಚು ಹಸುಗಳನ್ನು ಸಂರಕ್ಷಿಸಿದ್ದಾರೆ. ಈ ರೀತಿಯ ಅಕ್ರಮ ಬರಿ ಹೊಸಕೋಟೆ ಸೀಮಿತವಾಗಿಲ್ಲ. ಈ ಎಲ್ಲಾ ವಿಷಯಗಳ ಬಗ್ಗೆ ನಮ್ಮ ರಿಪೋರ್ಟರ್ ಸುರೇಶ್ ಬಾಬು ನೀಡಿರುವ ಸ್ವವಿವರದ ರಿಪೋರ್ಟ್ ನಿಮಗಾಗಿ.

Edited By : Manjunath H D
PublicNext

PublicNext

09/07/2022 10:01 pm

Cinque Terre

88.58 K

Cinque Terre

8

ಸಂಬಂಧಿತ ಸುದ್ದಿ