ಬೆಂಗಳೂರು: ಭಾನುವಾರ ಮುಂಜಾನೆ ಸೈಕಲ್ ಜಾಥಾದಲ್ಲಿದ್ದ ಮಹಿಳೆಯರು ಮತ್ತು ಯುವತಿಯರಿಗೆ ಬೀದಿ ಕಾಮುಕನೊಬ್ಬ ಇನ್ನಿಲ್ಲದಂತೆ ಕಾಡಿ ವಿಕೃತಿ ತೋರಿರೋ ಘಟನೆ ಅರಮನೆ ರಸ್ತೆಯ ಕಾವೇರಿ ಜಂಕ್ಷನ್ ಬಳಿ ನಡೆದಿದೆ. ಸೈಕಲ್ ಜಾಥಾದಲ್ಲಿ ಒಂಟಿಯಾಗಿ ಸಾಗ್ತಿದ್ದ ಯುವತಿಯರನ್ನ ಹಿಂಬದಿಯಿಂದ ಮುಟ್ಟಿ ಅಸಭ್ಯವರ್ತನೆ ತೋರಿದ್ದಾನೆ.
ಅದು ಕೂಡ ಒಬ್ಬರೊಂದಿ ಅನುಚಿತ ವರ್ತನೆ ತೋರದೆ ದಾರಿಯೂದ್ದಕ್ಕೂ ಒಂಟಿಯಾಗಿ ಸೈಕಲ್ ನಲ್ಲಿ ಹೋಗ್ತಿದ್ದ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.
ಸೈಕೋ ಸ್ಕೂಟರ್ ನಲ್ಲಿ ಬಂದು ವಿಕೃತಿ ತೋರಿ ಎಸ್ಕೇಪ್ ಆಗಿದ್ದಾನೆ. ಇನ್ನೂ ಈ ಸೈಕೋ ಕಾಮುಕನ ವಿರುದ್ಧ ಮೂವರು ಮಹಿಳೆಯರು ದೂರು ದಾಖಲಿಸಿದ್ದಾರೆ. ವಿಕೃತ ಕಾಮಿಯ ವಿರುದ್ಧ ಸದಾಶಿವನಗರಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದ್ದು, ವಿಕೃತ ಕಾಮಿ ಪತ್ತೆಗಾಗಿ ಪೊಲೀಸ್ರು ಈಗ ಬಲೆ ಬೀಸಿದ್ದಾರೆ.
PublicNext
05/07/2022 08:40 pm