ನೆಲಮಂಗಲ: ಅಂತಾರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮುಕ್ತ ದಿನದಂಗವಾಗಿ ಬೆಂಗಳೂರು ಕೇಂದ್ರ ವಲಯ ಪೊಲೀಸರು ಒಂದು ಟನ್‌ಗೂ ಅಧಿಕ ಮಾದಕ ವಸ್ತು ಸುಟ್ಟು ಹಾಕಿ ಡ್ರಗ್ಸ್ ಜಾಲಕ್ಕೆ ಕಡಿವಾಣ ಹಾಕುವ ಪ್ರತಿಜ್ಞೆ ಮಾಡಿದರು.
ದೊಡ್ಡ ದೊಡ್ಡ ಚೀಲಗಳಲ್ಲಿ ತುಂಬಿರೋ ಡ್ರಗ್ಸ್ ಪರಿಶೀಲನೆ ಮಾಡ್ತಾ ಇರೋ ಹಿರಿಯ ಪೊಲೀಸ್ ಅಧಿಕಾರಿಗಳು, ಭಸ್ಮವಾಗುತ್ತಿರೋ ಟನ್ ಗಾಂಜಾ! ಈ ದೃಶ್ಯ ಕಂಡು ಬಂದಿದ್ದು ನೆಲಮಂಗಲ ತಾಲೂಕಿನ ಡಾಬಸ್‌ಪೇಟೆ ಕೈಗಾರಿಕೆ ಪ್ರದೇಶದ ರಾಮ್ಕಿ ಕಾರ್ಖಾನೆಯಲ್ಲಿ.
ʼರಾಮ್ಕಿʼ ಕರ್ನಾಟಕ ವೇಸ್ಟ್ ಮ್ಯಾನೇಜ್ ಮೆಂಟ್ ಪ್ರಾಜೆಕ್ಟ್ ಘಟಕದಲ್ಲಿ ಇಂದು ಬೃಹತ್ ಮೊತ್ತದ ಡ್ರಗ್ಸ್ ನ್ನು ಪೊಲೀಸರು ಸುಟ್ಟು ಬೂದಿಯಾಗಿಸಿದರು. ಕಳೆದ ವರ್ಷ ಕೇಂದ್ರ ವಲಯ 6 ಜಿಲ್ಲೆಯ ಎಸ್ಪಿ ನೇತೃತ್ವದ ಠಾಣೆ ವ್ಯಾಪ್ತಿಗಳಲ್ಲಿ 1 ಟನ್ ಗೂ ಹೆಚ್ಚು ಡ್ರಗ್ಸ್ ವಶಪಡಿಸಲಾಗಿತ್ತು. ಗಾಂಜಾ, ಅಫೀಮು, ಬ್ರೌನ್ ಶುಗರ್, ಹೆರಾಯಿನ್, ಚರಸ್, ಕೊಕೈನ್ ಸಹಿತ ಕೋಟ್ಯಂತರ ಮೌಲ್ಯದ ಡ್ರಗ್ಸ್ ಭಸ್ಮವಾಯಿತು.
ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ನೇತೃತ್ವ ವಹಿಸಿದ್ದರು. ಈ ಮಧ್ಯೆ ಪೊಲೀಸ್ರು ಡ್ರಗ್ ಕಂಟ್ರೋಲ್ ಮಾಡುವ ಉದ್ದೇಶದಿಂದ ಪ್ರತಿಜ್ಞಾವಿಧಿ ಸ್ವೀಕರಿಸಿದ್ದು, ಐಜಿಪಿ ಚಂದ್ರಶೇಖರ್ ಪ್ರತಿಜ್ಞಾ ವಿಧಿ ಬೋಧಿಸಿದರು. "ಈ ಹಿಂದಿನ ಪ್ರಕರಣಗಳಿಗೆ ಹೋಲಿಸಿದರೆ ಸಾಕಷ್ಟು ಕಡಿವಾಣ ಹಾಕಿದ್ದೇವೆ. ಮುಂದೆಯೂ ಡ್ರಗ್ಸ್ ನಿಯಂತ್ರಣಕ್ಕೆ ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು" ಎಂದರು.
PublicNext
26/06/2022 07:43 pm