ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಪುಂಡರು, ಪುಡಿರೌಡಿಗಳಿಗೆ ಪೊಲೀಸರ ಭಯ ಕಡಿಮೆ ಆದಂಗೆ ಕಾಣುತ್ತಿದೆ. ರಾತ್ರಿಯಾದರೆ ಸಾಕು ಕೈಯಲ್ಲಿ ಲಾಂಗ್ ಹಿಡಿದು ಬೈಕ್‌ನಲ್ಲಿ ಬರುವ ಪುಂಡರು ಸಿಕ್ಕಸಿಕ್ಕವರನ್ನ ಹೆದರಿಸಿ ಸುಲಿಗೆ ಮಾಡುತ್ತಿದ್ದಾರೆ. ಇದೇ ವಾರದಲ್ಲಿ ಅನ್ನಪೂರ್ಣೇಶ್ವರಿ ನಗರ, ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸುಲಿಗೆ ಮಾಡಿರೋ ಪ್ರಕರಣ ಸಿಸಿಟಿವಿ ಸಮೇತ ಸುದ್ದಿಯಾಗಿತ್ತು. ಇದರೆ ಬೆನ್ನಲ್ಲೆ ಜಾಲಹಳ್ಳಿ ಬಳಿ ಲಾಂಗ್ ಹಿಡಿದು ಸುಲಿಗೆ ಮಾಡಿರುವ ಘಟನೆ ನಡೆದಿದೆ. ಇದನೆಲ್ಲ ನೋಡ್ತಿದ್ರೆ ಪೊಲೀಸರ ನೈಟ್ ಟೈಂ ಬೀಟ್ ವ್ಯವಸ್ಥೆ ಏನು ಮಾಡ್ತಿದೆ ಎಂಬ ಅನುಮಾನ ಕಾಡ್ತಿದೆ.
ಜಾಲಹಳ್ಳಿ ಬಳಿಯ ಎಂಇಎಸ್ ರಸ್ತೆಯಲ್ಲಿ ಮೂವರು ವ್ಯಕ್ತಿಯನ್ನ ಚಾಕುವಿನಿಂದ ಇರಿದು ಹಣ ಮತ್ತು ಫೋನ್ ದೋಚಿರುವ ಘಟನೆ ನಡೆದಿದೆ.
ಎಟಿಎಂನಿಂದ ಹಣ ಡ್ರಾ ಮಾಡಿ ವಾಪಸ್ ಆಗುವ ವೇಳೆ ಫಾಲೋ ಮಾಡಿದ ಪುಂಡರು ಚಾಕುವಿಂದ ಇರಿದು ಎಸ್ಕೇಪ್ ಆಗಿದ್ದಾರೆ. ಈ ಘಟನೆ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
25/06/2022 02:44 pm