ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾತ್ರಿಯಲ್ಲ, ಹಗಲು ವೇಳೆಯಲ್ಲಿಯೂ ಓಡಾಡುವುದು ಅಪಾಯಕಾರಿ

ಬೆಂಗಳೂರು: ನಗರದಲ್ಲಿ ಪುಂಡರ ಹಾವಳಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಹಲವು ಬಾರಿ ಜೈಲಿಗೆ ಹೋಗಿ ಬಂದರೂ ಇವರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ. ವಿದ್ಯಾರ್ಥಿಯರ ಸರ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ದರ್ಶನ್ ಹಾಗೂ ಮನೋಜ್ ಎಂಬ ಇಬ್ಬರು ಮತ್ತೊಂದು ಕೃತ್ಯವೆಸಗಿದ್ದಾರೆ.

ಏನೇ ಘಟನೆ ನಡೆದರೂ ತಮ್ಮ ಪಾಡಿಗೆ ತಾವಿರುವ ಜನರ ಮನಸ್ಥಿತಿಯನ್ನರಿತ ಕಿಡಿಗೇಡಿಗಳು ಹಾಡಹಗಲೇ ಎಟಿಎಂ ಕಾರ್ಡ್ ಚಿನ್ನದ ಸರ, ನಗದು ದೋಚಿದ ಘಟನೆ ಬೆಳಕಿಗೆ ಬಂದಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು, ದಾರಿಯಲ್ಲಿ ಹೋಗುತ್ತಿದ್ದ ಯುವಕನೊಬ್ಬನನ್ನ ಫಾಲೋ ಮಾಡಿದ ಇಬ್ಬರು ಏಕಾಏಕಿ ಯುವಕನ ಬಳಿ ಬಂದು ಹಲ್ಲೆ ಮಾಡುತ್ತಾರೆ. ನಂತರ ಆತನ ಬಳಿ ಇದ್ದ ಚಿನ್ನದ ಸರ, ಪರ್ಸ್ ಸೇರಿ ಹಲವಾರು ವಸ್ತುಗಳನ್ನು ದೋಚಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ಯಾರೊಬ್ಬರೂ ಇವರ ಬಗ್ಗೆ ಪ್ರಶ್ನೆ ಮಾಡಿಲ್ಲ. ಇನ್ನು ಈ ಬಗ್ಗೆ ಯುವಕ ದೂರು ದಾಖಲಿಸಿದ್ದು, ಅನ್ನಪೂರ್ಣೇಶ್ವರಿ ನಗರ ಪೊಲೀಸರು ಸದ್ಯ ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.

Edited By :
PublicNext

PublicNext

24/06/2022 08:33 pm

Cinque Terre

41.62 K

Cinque Terre

1

ಸಂಬಂಧಿತ ಸುದ್ದಿ