ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪತ್ನಿ ಕೊಂದು ಪೊಲೀಸ್‌ ಕಂಟ್ರೋಲ್‌ ರೂಮ್ ಗೆ ಕರೆ ಮಾಡಿದ ಪತಿ!

ಬೆಂಗಳೂರು: ಗಂಡ ಸಾಲ‌ ಮಾಡಿದ್ರೆ ಮನೆಯಲ್ಲಿ ಹೆಂಡತಿ ಜಗಳ‌ ಮಾಡೋದು ಕಾಮನ್. ಸಾಲ ತೀರಿಸಿ ನೆಮ್ಮದಿಯ ಜೀವನ ಮಾಡಬೇಕು ಅಂದುಕೊಳ್ಳೋದು ಪ್ರತಿ ಗೃಹಿಣಿಯ ಆಸೆ. ಆದ್ರೆ, ಹೆಂಡತಿ ಸಾಲ ತೀರಿಸು ಅಂತ ಗಲಾಟೆ ಮಾಡಿದ್ದಕ್ಕೆ ಹೆಂಡತಿಯನ್ನೇ ಗಂಡ ಕೊಲೆ ಮಾಡಿ ನಂತರ ತಾನೇ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದಾನೆ!

ಒಂದು ಕಡೆ ಅಪ್ಪ- ಅಮ್ಮನ ಜಗಳದಲ್ಲಿ ಪ್ರಾಣಾಪಾಯದಿಂದ ಪಾರಾಗಿರೋ 13 ವರ್ಷದ ಮಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಹೆಂಡತಿ ಕೊಂದು ಮಗಳನ್ನೂ ಸಾಯಿಸೋಕೆ ಮುಂದಾಗಿದ್ದವನು, ಕೊನೆಗೆ ಮನಸ್ಸು ಬದಲಿಸಿ ಪೊಲೀಸ್ರಿಗೆ ತಾನೇ ಕರೆ ಮಾಡಿ ಶರಣಾಗಿದ್ದಾನೆ.

1 ಲಕ್ಷ 20 ಸಾವಿರ ರೂ. ಸಾಲ ಮಾಡಿಕೊಂಡಿದ್ದ ತಾನೇಂದ್ರ‌ನಿಗೆ ಸಾಲ ತೀರಿಸುವ ವಿಚಾರಕ್ಕೆ ರಾತ್ರಿಯೆಲ್ಲ ಪತ್ನಿ ಅನಸೂಯ ಗಲಾಟೆ ಮಾಡಿದ್ಳು. ಬೆಳಗ್ಗೆ 3 ಗಂಟೆ ಸಂದರ್ಭ ಚಾಕುವಿನಿಂದ‌ ಇರಿದು ಹತ್ಯೆ ಮಾಡಿದ ತಾನೇಂದ್ರ, ಮುಂಜಾನೆ ತನಕ ಶವದ ಪಕ್ಕದಲ್ಲೇ ಇದ್ದ.

ಬೆಳಗ್ಗೆ 9.30ಕ್ಕೆ ಪೊಲೀಸ್ ಠಾಣೆಗೆ ಫೋನ್ ಮಾಡಿದ್ದಾನೆ.

ತಾಯಿ ಕೊಲೆಯಿಂದ ಪ್ರಜ್ಞೆ ತಪ್ಪಿದ್ದ ಪುತ್ರಿ, ಎಚ್ಚರವಾದ ಬಳಿಕ ಜೋರಾಗಿ ಅಳೋಕೆ ಶುರು ಮಾಡಿದ್ಳು‌. ಇದ್ರಿಂದ ಮನಸು ಬದಲಿಸಿಕೊಂಡ ತಾನೇಂದ್ರ, ಠಾಣೆಗೆ ಫೋನಾಯಿಸಿ ಶರಣಾಗಿದ್ದಾನೆ. ಬೆಂಗಳೂರಿನ ಮತ್ತಿಕೆರೆ ಬಸ್ ನಿಲ್ದಾಣ ಬಳಿ ಘಟನೆ ನಡೆದಿದ್ದು, ಪತ್ನಿ- ಮಗಳನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು‌ ಮುಂದಾಗಿದ್ದ ಎಂದು ತಿಳಿದು ಬಂದಿದೆ.

Edited By :
Kshetra Samachara

Kshetra Samachara

22/06/2022 03:03 pm

Cinque Terre

9.08 K

Cinque Terre

0

ಸಂಬಂಧಿತ ಸುದ್ದಿ