ಬೆಂಗಳೂರು:ಒಂದು ಮನೆಯಲ್ಲಿ ಕಳ್ಳತನ ಆದ್ರೆ ಸಾರ್ ಇಷ್ಟು ಚಿನ್ನಹೋಗಿದೆ ಅಷ್ಟು ಕ್ಯಾಶ್ ಹೋಗಿದೆ ಅಂತ ಕಳೆದುಕೊಂಡವರು ಪೊಲೀಸರಿಗೆ ಮಾಹಿತಿ ನೀಡೋದು ಕಾಮನ್. ಇವ್ರು ಮಾಹಿತಿ ಕೊಟ್ರು ಅಂದ ಮಾತ್ರಕ್ಕೆ ಪೊಲೀಸ್ರು ಕೂಡ ಸುಮ್ಮನೆ ಒಪ್ಪಿಕೊಳ್ಳಲ್ಲ. ದೂರುದಾರರು ನೀಡುವ ಮಾಹಿತಿಗೆ ದಾಖಲೆ ಕೊಡಬೇಕು. ಆದ್ರೆ ಕಳೆದ ತಿಂಗಳು ಚಾಮರಾಜಪೇಟೆಯಲ್ಲಿ ಉದ್ಯಮಿ ಜುಗ್ಗುರಾಜ್ ಕೊಲೆ ಪ್ರಕರಣದಲ್ಲಿ ಕುಟುಂಬಸ್ಥರಿಗೆ ಚಿನ್ನಾಭರಣದ ದಾಖಲೆ ಇಲ್ಲ. ಪ್ರಕರಣದಲ್ಲಿ ಮೂವರನ್ನ ಬಂಧಿಸಿರುವ ಚಾಮರಾಜಪೇಟೆ ಪೊಲೀಸರು ಐದು ಕೋಟಿ ಮೌಲ್ಯದ ಚಿನ್ನಾಭರಣವನ್ನ ರಿಕವರಿ ಮಾಡಿದ್ದಾರೆ.
ಅಚ್ಚರಿ ಅಂದ್ರೆ ಇದುವರೆಗೂ ಕಳ್ಳತನವಾಗಿರುವ ಹಣ ಹಾಗೂ ಚಿನ್ನಾಭರಣ ಎಷ್ಟು ಎಂಬುದರ ಬಗ್ಗೆ ಗೊತ್ತೇ ಇಲ್ಲ ಎನ್ನುತ್ತಿದ್ದಾರೆ ಜುಗ್ಗುರಾಜ್ ಕುಟುಂಬಸ್ಥರು. ಪ್ರಕರಣದ ಪ್ರಮಯಖ ಆರೋಪಿ ಜುಗ್ಗುರಾಜ್ ಮನೆಯಲ್ಲಿನ ಅಪಾರ ಪ್ರಮಾಣದ ಚಿನ್ನಾಭರಣ ಮಾಹಿತಿ ತಿಳಿದೆ ಆರೋಪಿ ಬಿಜೋರಾಮ್ ಕೊಲೆ ಸ್ಕೆಚ್ ಹಾಕಿದ್ದ. ಸದ್ಯ ಬಿಜೋರಾಮ್ ಅಂಡ್ ಟೀಂ ಬಂಧಿಸಿ 4,93 ಕೋಟಿ ಮೌಲ್ಯದ 8 ಕೆಜಿ 752 ಗ್ರಾಂ ಚಿನ್ನ, 3 ಕೆ.ಜಿ.870 ಗ್ರಾಂ ಬೆಳ್ಳಿ, ಹಾಗೂ 53 ಲಕ್ಷ ನಗದು ಜಪ್ತಿ ಮಾಡಿಕೊಂಡಿದ್ದರು.
ದೀಪ ಎಲೆಕ್ಟ್ರಿಕಲ್ ಮಾಲೀಕನಾಗಿದ್ದ ಜುಗ್ಗುರಾಜ್‌ಗೆ ಪ್ರತಿದಿನ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದರು. ಜೊತೆಗೆ ಓಡವೆ ಗಿರವಿ ಇಟ್ಟುಕೊಂಡು ಹಣದ ಲೇವಾದೇವಿ ಮಾತ್ರ ಮಾಡ್ತಿದ್ರು. ಈ ಹಣಕಾಸಿನ ವ್ಯವಹಾರ ಬಗ್ಗೆ ಮಕ್ಕಳ ಹತ್ತಿರ ಹೇಳಿಕೊಂಡಿರಲಿಲ್ಲ ಎನ್ನಲಾಗುತ್ತಿದೆ. ಇದೇ ವಿಚಾರ ಜುಗ್ಗುರಾಜ್ ಕುಟುಂಬಸ್ಥರಿಗೆ ಮುಳುವಾಗಿದ್ದು ಸರಿಯಾದ ದಾಖಲೆ ನೀಡದಿದ್ರೆ ಕೋಟಿ ಕೋಟಿ ಸಂಪತ್ತು ಸರ್ಕಾರದ ಪಾಲಾಗುತ್ತೆ. ಒಂದು ವೇಳೆ ನಕಲಿ ದಾಖಲೆ ಸೃಷ್ಠಿಸಿ ಚಿನ್ನಾಭರಣ ಪಡೆದ್ರು ಐಟಿ ಸಂಕಷ್ಟ ಎದುರಾಗೋ ಸಾಧ್ಯತೆಯಿದೆ. ಯಾಕಂದ್ರೆ ಜುಗ್ಗುರಾಜ್ ಯಾವ ಮೂಲಗಳಿಂದ ಹಣ ಸಂಪಾದನೆ ಮಾಡಿದ್ದರು? ವ್ಯವಹಾರದಿಂದ ಬಂದಿದ್ದ ಹಣವೆಷ್ಟು ? ಚಿನ್ನಾಭರಣ ಖರೀದಿಸಿದಕ್ಕೆ ರಸೀದಿಗಳು? ಆದಾಯಕ್ಕೆ ಪ್ರತಿಯಾಗಿ ತೆರಿಗೆ ಪಾವತಿಸಿದ್ದರೆ ದಾಖಲೆ ನೀಡಬೇಕು. ಈ ಎಲ್ಲ ದಾಖಲೆ ಸರಿಯಿದ್ದರೆ ನ್ಯಾಯಾಲಯಕ್ಕೆ ಹೋಗಿ ಚಿನ್ನಾಭರಣ ಬಿಡಿಸಿಕೊಳ್ಳಬಹುದಾಗಿದೆ. ದಾಖಲೆ ನೀಡದಿದ್ದರೆ ಜಪ್ತಿಯಾದ ಚಿನ್ನಾಭರಣ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ. ಮತ್ತೊಂದೆಡೆ ಜಪ್ತಿ ಮಾಡಿಕೊಂಡ ಚಿನ್ನಾಭರಣಕ್ಕೆ ಐಟಿ ಇಲಾಖೆಗೆ ಚಾಮರಾಜಪೇಟೆ ಪೊಲೀಸರು ಪತ್ರ ಬರೆದಿದ್ದಾರೆ. ಹೀಗಾಗಿ ಒಂದು ವೇಳೆ ಸುಳ್ಳು ದಾಖಲೆ ನೀಡಿದ್ದೇ ಆದಲಲಗಿ ಸಂಕಷ್ಟ ಎದುರಾಗೋ ಸಾಧ್ಯತೆಯಿದೆ.
Kshetra Samachara
17/06/2022 05:50 pm