ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿಜಯಪುರ ಪುರಸಭೆ ಅಕ್ರಮ ಒತ್ತುವರಿ ತೆರವಿಗೆ ಮೀನಾಮೇಷ; ಹೈಕೋರ್ಟ್ ಆದೇಶಕ್ಕೆ ಬೆಲೆಯೇ ಇಲ್ಲ!?

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ವಿಜಯಪುರ ಪುರಸಭೆಗೆ ಸೇರಿದ ರಸ್ತೆಯನ್ನು ಮುನಿರಾಜು ಎಂಬುವವರು ಒತ್ತುವರಿ ಮಾಡಿಕೊಂಡಿದ್ದಾರೆ. ಲಕ್ಷಾಂತರ ಬೆಲೆಯ ಆಸ್ತಿ ಒತ್ತುವರಿ ಮಾಡಿದ್ದೂ ಅಲ್ಲದೆ, ಅನುಮತಿ ಪಡೆಯದೆ 4 ಅಂತಸ್ತಿನ ಕಟ್ಟಡ ನಿರ್ಮಿಸಿದ್ದಾರೆ.

ಅಕ್ರಮ ಖಾತೆ ಮಾಡಿಕೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ಸಹ ಅಕ್ರಮ ಒತ್ತುವರಿ ತೆರವಿಗೆ ಆದೇಶಿಸಿದೆ. ನಾಲ್ಕೈದು ಬಾರಿ ಒತ್ತುವರಿ ತೆರವಿಗೆ ಟೆಂಡರ್ ಕರೆದಿದ್ದರೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಲಕ್ಷಾಂತರ ಬೆಲೆ ಆಸ್ತಿಯ ತೆರವು ಕಾರ್ಯಾಚರಣೆ ನಡೆದಿಲ್ಲ.

ಈ ಎಲ್ಲಾ ವಿಷಯಗಳ ಬಗ್ಗೆ ವಿಜಯಪುರದ ಮುನಿರಾಜು ಅವರ ಒತ್ತುವರಿ ಕಟ್ಟಡದ ಬಳಿಯಿಂದ ನಮ್ಮ‌ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

Edited By : Nagesh Gaonkar
PublicNext

PublicNext

16/06/2022 10:43 pm

Cinque Terre

40.4 K

Cinque Terre

0

ಸಂಬಂಧಿತ ಸುದ್ದಿ