ನೆಲಮಂಗಲ: ಪೆಟ್ರೋಲ್ ಬಂಕ್‌ನಲ್ಲಿ ಮೊಬೈಲ್ ಬಳಕೆ ಮಾಡಬೇಡಿ, ಮೊಬೈಲ್‌ನಲ್ಲಿ ಮಾತನಾಡಬೇಡಿ ಎಂದು ಹೇಳಿದ ಪೆಟ್ರೋಲ್ ಬಂಕ್ ಮಹಿಳಾ ಸಿಬ್ಬಂದಿಗೆ ವ್ಯಕ್ತಿಯೋರ್ವ ಕಪಾಳಮೋಕ್ಷ ಮಾಡಿದ ಘಟನೆ ಬೆಂಗಳೂರು ಹೆಸರಘಟ್ಟ ರಸ್ತೆಯಲ್ಲಿ ನಡೆದಿದೆ.
ಮಲ್ಲಸಂದ್ರದ ಗಿರೀಶ್ ಹಲ್ಲೆ ಮಾಡಿದ ಯುವಕ. ಆರೋಪಿ ಗಿರೀಶ್ ಪೆಟ್ರೋಲ್ ತುಂಬಿಸಿಕೊಳ್ಳಲು ಬಂಕ್‌ಗೆ ಬಂದಿದ್ದ. ಈ ವೇಳೆ ಮೊಬೈಲ್‌ನಲ್ಲಿ ಮಾತಾಡುತ್ತಿದ್ದರಿಂದ ಪೆಟ್ರೋಲ್ ಹಾಕುತ್ತಿದ್ದ ಮಂಜುಳಾ ಎಂಬುವರು ಆತನಿಗೆ ಸಾಕಷ್ಟು ಬಾರಿ ಫೋನ್ ಕಾಲ್ ಕಟ್ ಮಾಡುವಂತೆ ಹೇಳಿದ್ದಾರೆ. ಇದಕ್ಕೆ ಕ್ಯಾರೆ ಎನ್ನದ ಗಿರೀಶ್ ಹಣ ಪಾವತಿ ಮಾಡಲು ಮುಂದಾಗಿದ್ದಾನೆ. ಅಷ್ಟೇ ಅಲ್ಲದೆ ಫೋನ್‌ನಲ್ಲಿ ಮಾತುತ್ತಿರುವುದು ನಿಂಗ ಕಾಣಲ್ವಾ ಎಂದು ಮಂಜುಳಾ ಮೇಲೆ ರೇಗಿದ್ದಾನೆ. ಇದಕ್ಕೆ ಪ್ರತಿಯಾಗಿ ಮಂಜುಳಾ ಅವರು, 'ಸರ್ ಪೆಟ್ರೋಲ್ ಬಂಕ್‌ನಲ್ಲಿ ಮೊಬೈಲ್ ಬಳಸಬಾರದು ಎನ್ನುವುದು ಗೊತ್ತಾಗಲ್ವಾ? ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಗಿರೀಶ್ ಮಂಜುಳಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಕ್ಕೆ ಹೊಡೆದು ಕೈಲಿದ್ದ ಎಟಿಎಂ ಮೆಷನ್ ಕಸಿದು ಹಾಳು ಮಾಡಿದ್ದಾನೆ. ಈ ದೃಶ್ಯಗಳು ಸಿಸಿ ಕ್ಯಾಮೆರಾದಲ್ಕಿ ಸೆರೆಯಾಗಿವೆ.
ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಅಲ್ಲೆ ಇದ್ದ ಸಿಬ್ಬಂದಿ ಮಂಜುಳಾ ಅವರ ನೆರವಿಗೆ ದಾವಿಸಿದ್ದಾರೆ. ಘಟನೆ ಬಳಿಕ ಮಂಜುಳಾ ಹಾಗೂ ಅವರ ಕುಟುಂಬಸ್ಥರು ನ್ಯಾಯಕ್ಕಾಗಿ ಬಾಗಲಗುಂಟೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದೇ ವೇಳೆ ಪೆಟ್ರೋಲ್ ಬಂಕ್ ಬಳಿ ಹಾರಾಡಿ ಚೀರಾಡಿದ್ದ ಗಿರೀಶ್ ಪೊಲೀಸರ ಮುಂದೆ ಇಲಿಯಂತೆ ಮಂಜುಳಾ ಬಳಿ ಕ್ಷಮೆ ಕೇಳಿದ್ದಾನೆ.
PublicNext
16/06/2022 08:27 am