ಬೆಂಗಳೂರು: ಸಾಲ ತೀರಿಸಲು ಮಹಿಳೆಯರಿಬ್ಬರು ಕಿಡ್ನಾಪ್ ಗೆ ಖತರ್ನಕ್ ಪ್ಲಾನ್ ಮಾಡಿದ್ದು ಪೊಲೀಸರ ತನಿಖೆಯಲ್ಲಿ ಬಹಿರಂಗಗೊಂಡಿದೆ. ಬಾಲಕ ಕಿಡ್ನಾಪ್ ಆದಾಗ ಮಳ್ಳಿಯಂತೆ ನಟಿಸಿದ್ದ ಮಂಗೀತ ನಿಜ ಬಣ್ಣ ಖಾಕಿ ತನಿಖೆಯಲ್ಲಿ ಬಯಲಾಗಿದೆ.
ಜೂನ್ 7 ಸಂಜೆ 5.10 ರ ಸಮಯ. ಬಿಎಂಟಿಸಿ ಬಸ್ ಚಾಲಕ ಸುಭಾಷ್ ಮತ್ತು ಅಶ್ವಿನಿ ದಂಪತಿಯ 11 ವರ್ಷದ ಮಗನನ್ನು ಹೊರಮಾವು ಅಗರ ಬಳಿಯ ಮನೆ ಹತ್ತಿರದಿಂದ ಅಪಹರಿಸಲಾಗಿತ್ತು. ಕಿಡ್ನಾಪ್ ಮಾಡಿದ್ದ ಗ್ಯಾಂಗ್ 50 ಲಕ್ಷಕ್ಕೆ ಬೇಡಿಕೆ ಇಟ್ಟಿತ್ತು. ಈ ಕೇಸ್ಗೆ ಸಂಬಂಧಿಸಿದಂತೆ ಮಂಗೀತಾ, ದುರ್ಗಾ, ಗೌರವ್ ಸಿಂಗ್ ನನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಗೌರವ್ಗಾಗಿ ಬಲೆಬೀಸಿದ್ದಾರೆ.
ಮೈತುಂಬ ಸಾಲಮಾಡಿಕೊಂಡಿದ್ದ ಮಂಗೀತಾ ಹಾಗೂ ದುರ್ಗಗೆ ಸಾಲ ತೀರಿಸಲು ಬೇರೆ ದಾರಿ ಕಾಣಲಿಲ್ಲ..ಅಲ್ಲದೆ ಮಂಗೀತಾ ಗರ್ಭಿಣಿ ಕೂಡ ಆಗಿರೋದರಿಂದ ಡೆಲಿವರಿಗೆ ಹಣ ಹೊಂದಿಸಲು ಕಿಡ್ನಾಪ್ ಪ್ಲ್ಯಾನ್ ಮಾಡಿದ್ರು. ಬಾಲಕನ ಮನೆಯ ಪಕ್ಕದ ಮನೆಯವಳೇ ಆದ ಮಂಗೀತಾ ಬಾಲಕನನ್ನು ಮೇನ್ ರೋಡ್ ವರೆಗೂ ಹೋಗುವಂತೆ ಹೇಳಿದ್ದಾಳೆ. ಅಲ್ಲಿಗೆ ಬಂದ ದುರ್ಗಾ ಸ್ವಿಮ್ಮಿಂಗ್ ಪೂಲ್ ಗೆ ಹೋಗೋಣ ಅಂತ ಆಟೋ ಹತ್ತಿಸಿ ಕರೆದೊಯ್ದಿದ್ದಾಳೆ.
ಸೀದಾ ಜಿಗಣಿ ಬಳಿಯ ಜೆ.ಆರ್.ಫಾರ್ಮ್ ಹೌಸ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಸಂಬಂಧಿ ಗೌರವ್ ಸಿಂಗ್ ಬಳಿ ಬಿಟ್ಟು ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ. ಕೊನೆಗೆ ಬಾಲಕನ ತಾಯಿಯ ನಂಬರ್ ಕೊಟ್ಟು ಗೌರವ್ ಸಿಂಗ್ ಬಳಿ ಕಾಲ್ ಮಾಡಲಾಗಿತ್ತು. ಪೋಷಕರು ರಾತ್ರಿ.9.30 ಕ್ಕೆ ಹೆಣ್ಣೂರು ಪೊಲೀಸ್ ಠಾಣೆಗೆ ಬಂದು ವಿಚಾರ ತಿಳಿಸಿದ್ರು.ತಕ್ಷಣ ಕಾರ್ಯಪ್ರವೃತ್ತರಾದ 9 ಜನ ಪೊಲೀಸರ ತಂಡ ಅದೊಂದು ಕರೆಯ ಟವರ್ ಲೊಕೇಶನ್ ಆಧರಿಸಿ ಜಿಗಣಿ ಬಳಿ ಇರುವ ಜೆ.ಆರ್ ಫಾರ್ಮ್ ಬಳಿ ಬಾಲಕನನ್ನ ರಕ್ಷಿಸಿ ಆರೋಪಿಯನ್ನ ಬಂಧಿಸಿದ್ರು.
Kshetra Samachara
10/06/2022 04:15 pm