ವರದಿ: ಬಲರಾಮ್ ವಿ.
ಬೆಂಗಳೂರು: ಮನೆಗಳ್ಳತನ, ವಾಹನ ಕಳ್ಳತನ, ದರೋಡೆ ಸೇರಿದಂತೆ ಇನ್ನಿತರ ಅಪರಾಧ ಕೃತ್ಯಗಳಲ್ಲಿ ಭಾಗವಹಿಸಿದ್ದ 20 ಮಂದಿ ಖದೀಮರನ್ನು ವೈಟ್ ಫೀಲ್ಡ್ ವಿಭಾಗ ಪೊಲೀಸರು ಬಂಧಿಸಿದ್ದಾರೆ.
ವೈಟ್ ಫೀಲ್ಡ್ ವಿಭಾಗದ ಕೆಆರ್ ಪುರ, ಮಾರತ್ತಹಳ್ಳಿ, ಕಾಡುಗುಡಿ, ಹೆಚ್.ಎ.ಎಲ್., ವೈಟ್ ಫೀಲ್ಡ್, ಬೆಳ್ಳಂದೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ವೈಟ್ ಫೀಲ್ಡ್ ವಿಭಾಗ ಪೊಲೀಸರು ಬಂಧಿಸಿ 9 ಕಾರು, 1 ಆಟೋರಿಕ್ಷಾ, 45 ದ್ವಿಚಕ್ರ ವಾಹನ, 135 ಮೊಬೈಲ್ಸ್, 1 ಲ್ಯಾಪ್‌ಟಾಪ್, 5 ಕ್ಯಾಮೆರಾ, 150 ಗ್ರಾಂ ಚಿನ್ನದ ಸರ, 1.5 ಕೆ.ಜಿ. ಬೆಳ್ಳಿ ಆಭರಣ ವಶ ಪಡಿಸಿದ್ದಾರೆ.
ಕೆಆರ್ ಪುರ ಪೊಲೀಸರಿಂದ ಬಂಧಿತ ಆರೋಪಿಗಳು ಆಯಾನ್ ಪಾಷಾ, ಲೋಕೇಶ್, ರವಿತೇಜ್, ಜಗನ್, ಅವಾಲ ಕವಾಡಿ ಚಿನ್ನ, ಶಕ್ತಿವೇಲು,ವಿಜಯ್. ಮಾರತ್ತಹಳ್ಳಿ ಪೊಲೀಸರಿಂದ ಬಂಧಿತ ಆರೋಪಿಗಳು ಶಾಂತಕುಮಾರ್, ನಾಸೀರ್, ಗಣೇಶ್, ಜ್ಞಾನ ಪ್ರಕಾಶ್, ಅರವಿಂದ್, ಜೊಸೇಫ್.
ಕಾಡುಗುಡಿ ಪೊಲೀಸರಿಂದ ಬಂಧಿತರು ಸುಭಾನ್, ಅರ್ಬಾಜ್, ಸಲೀಂ. ಹೆಚ್.ಎ.ಎಲ್. ಪೊಲೀಸರಿಂದ ಬಂಧಿತ ಆರೋಪಿ ಚರಣ್ ರಾಜ್. ವೈಟ್ ಫೀಲ್ಡ್ ಪೊಲೀಸರಿಂದ ಬಂಧಿತ ಆರೋಪಿ ಬಾಲಾಜಿ. ಬೆಳ್ಳಂದೂರು ಪೊಲೀಸರಿಂದ ಬಂಧಿತರು ರಘು ನಾಯಕ್, ಕೆಂಪೇಗೌಡ, ಅರ್ಜನ್ ಹಕಮ್ ಸಿಂಗ್. ವೈಟ್ ಫೀಲ್ಡ್ ವಿಭಾಗ ಪೊಲೀಸರ ಕಾರ್ಯಾಚರಣೆಗೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
PublicNext
09/06/2022 10:14 pm