ಬೆಂಗಳೂರು: ಮಳೆ ನಿಂತರೂ ಹನಿಗಳು ನಿಂತಿಲ್ಲ... ಎಂಬ ಮಾತಿನಂತೆ, ದಿನದಿಂದ ದಿನಕ್ಕೆ PSI ಅಕ್ರಮ ಕರ್ಮಕಾಂಡದ ಒಂದೊಂದೇ ಎಳೆ ಬಿಚ್ಚಿ ಕೊಳ್ತಿವೆ. ಅಕ್ರಮದ ಮೂಲಕವೇ ಅತಿ ಹೆಚ್ಚು ಮಾರ್ಕ್ಸ್ ಗಿಟ್ಟಿಸಿದ್ದ ದರ್ಶನ್ ಗೌಡ ವಿರುದ್ಧ CID ಪೊಲೀಸರು ಯಲಹಂಕ ಉಪನಗರ ಠಾಣೆಯಲ್ಲಿ ಮತ್ತೊಂದು FIR ದಾಖಲಿಸಿದ್ದಾರೆ.
ಯಲಹಂಕ ಉಪನಗರದ ಎಕ್ಸಾಂ ಸೆಂಟರ್ ನಲ್ಲಿ ದರ್ಶನ್ ಗೌಡ ಮತ್ತಿತರರು ಪರೀಕ್ಷೆ ಬರೆದಿದ್ದರು. ಈ ವೇಳೆ OMR ಶೀಟನ್ನೂ ತಿದ್ದಲಾಗಿದೆ. ಆ ಮೂಲಕ ದರ್ಶನ್ ಮತ್ತಿತರರು ಹೆಚ್ಚು ಅಂಕ ಗಳಿಸಿರಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ 5ಕ್ಕೂ ಅಧಿಕ ಸೆಕ್ಷನ್ ಗಳ ಅಡಿ FIR ದಾಖಲಾಗಿದೆ. ಇನ್ನೂ ಹೆಚ್ಚಿನ ವಿಚಾರಣೆ ಮುಂದುವರೆಸಿದ್ದೇವೆ ಎನ್ನುತ್ತಾರೆ ಈಶಾನ್ಯ ವಿಭಾಗದ ಪೊಲೀಸರು.
PublicNext
08/06/2022 10:16 pm