ನೆಲಮಂಗಲ: ಈ ದೃಶ್ಯ ಸರಿಯಾಗಿ ನೋಡಿ... ಹೀಗೆ ಆಟೋ ಹಿಂದೆ ಮೂವರು ನಿಂತ್ಕೊಂಡು ಜೋರಾಗಿ ಮಾತಿಗೆ ಮಾತು ಬೆಳೆಸಿ ಹೊಡೆದಾಡೋ ಮಟ್ಟಕ್ಕೆ ಹೋಗಿದ್ದಾರೆ. ಈ ಹೊಡೆದಾಟ ತಾರಕಕ್ಕೆ ಏರಿದ ಹೊತ್ತಲ್ಲಿ ಆತನ ಜೇಬಿನಲ್ಲಿದ್ದ ಚಾಕು ಈಚೆ ಬಂದು ಚುಚ್ಚಿ ಕೊಲ್ಲೋಕೆ ಮುಂದಾಗ್ತಾನೆ.
ಅಷ್ಟರಲ್ಲೇ ಸ್ಥಳದಲ್ಲಿದ್ದವರು ಅವರನ್ನು ಬಿಡಿಸಿ ಜೀವ ಉಳಿಸಿದ್ದಾರೆ. ಈ ನೋಟ ಕಂಡು ಬಂದಿದ್ದು ನೆಲಮಂಗಲ ತಾಲ್ಲೂಕಿನ ಕೆಂಗಲ್ ಕೆಂಪೋಹಳ್ಳಿ ಗ್ರಾಮದಲ್ಲಿ. ರಾ.ಹೆ. 48ರ ತುಮಕೂರು ರಸ್ತೆ ಪಕ್ಕವೇ ಘಟನೆ ನಡೆದಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
ಹೌದು, ಹೀಗೆ ಚಾಕು ಹಿಡಿದು ಚುಚ್ಚಲು ಮುಂದಾಗಿರುವ ಈತ ಆಟೋ ಮಂಜ. ಮತ್ತೊಬ್ಬನ ಹೆಸರು ಬಂಡಯ್ಯ ಸ್ವಾಮಿ. ಈ ಬಂಡಯ್ಯ ಸ್ವಾಮಿ ಮಂಜನ ಸ್ನೇಹಿತನ ಹತ್ರ ಒಂದು ವರ್ಷದ ಹಿಂದೆ 3 ಸಾವಿರ ರೂ. ಇಸ್ಕೊಂಡಿದ್ನಂತೆ. ಆದ್ರೆ, ಎಷ್ಟು ದಿನ ಆದ್ರೂ ಹಣ ಕೊಡದ ಹಿನ್ನೆಲೆ ಸ್ವಾಮಿ ಬಳಿ ಹಣ ಪಡೆದವನು ಆಟೋ ಚಾಲಕ ಮಂಜನನ್ನು ಕರ್ಕೊಂಡು ಬಂದಿದ್ದ.
ಈ ವೇಳೆ ಮಾತಿಗೆ ಮಾತು ಬೆಳೆದು ರಸ್ತೆಯಲ್ಲೇ ಬಡಿದಾಡಿಕೊಳ್ಳೋ ಹಂತಕ್ಕೆ ಬಂದಿದ್ರು. ಈ ಮಧ್ಯೆ ಮಂಜ ಚಾಕು ತೆಗೆದು ಹಲ್ಲೆಗೆ ಮುಂದಾಗ್ತಾನೆ. ತಕ್ಷಣ ಸ್ಥಳೀಯರು ಜಗಳ ಬಿಡಿಸಿ ಇಬ್ಬರನ್ನೂ ಬೈದು ಕಳುಹಿಸಿದ್ದಾರೆ.
ಈ ಬಗ್ಗೆ ಮುಂಜಾನೆಯಿಂದ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಬೆನ್ನಲ್ಲೇ ಇಬ್ಬರನ್ನೂ ಕರೆಸಿದ ದಾಬಸ್‌ಪೇಟೆ ಠಾಣೆ ಪೊಲೀಸ್ರು, ವಿಚಾರಣೆ ನಡೆಸಿ ಆರೋಪಿ ಮಂಜನ ಮೇಲೆ ಕೇಸು ದಾಖಲಿಸಿ, ಜೈಲಿಗಟ್ಟಿದ್ದಾರೆ.
PublicNext
03/06/2022 10:11 pm