ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಉದ್ಯಮಿ ಜುಗುರಾಜ್ ಜೈನ್ ಕೊಲೆ ಆರೋಪಿ ಗುಜರಾತ್ ನಲ್ಲಿ ಸೆರೆ

ಬೆಂಗಳೂರು: ತನ್ನ ಮಾಲೀಕ ಉದ್ಯಮಿ ಜುಗುರಾಜ್ ಜೈನ್ ಅವರ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಕೆಲಸದಾಳು ಬಿಜೋರಾಮ್ ಗುಜರಾತ್ ಪೊಲೀಸ್ರ ಬಲೆಗೆ ಬಿದ್ದಿದ್ದಾನೆ. ಆರೋಪಿ ಮೂಟೆಯಲ್ಲಿ ನಗ-ನಗದು ಹೊತ್ತು ಪರಾರಿಯಾಗಿದ್ದ. ಆದ್ರೆ ಗುಜರಾತ್ ಪೊಲೀಸ್ರು ವಾಹನ ತಪಾಸಣೆ ಮಾಡುವಾಗ ಕ್ಯಾಶ್ ಪತ್ತೆಯಾದ ಹಿನ್ನೆಲೆ ಬಿಜೋರಾಮ್‌ನ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಬಿಜೋರಾಮ್‌ನ ಹಿಂದೆ ಸಾಕಷ್ಟು ಕಾಣದ ಕೈಗಳು ಕೆಲಸ ಮಾಡಿರೋ‌ ಸಾಧ್ಯತೆಯಿದೆ ಎಂದು ಬೆಂಗಳೂರು ಪೊಲೀಸ್ರು ಅನುಮಾನಿಸಿದ್ದಾರೆ. ಕೋಟಿ ಕೋಟಿ ಮೌಲ್ಯದ ಚಿನ್ನಾಭರಣ ಎಲ್ಲಿ? ಅನ್ನೋ ದೊಡ್ಡ‌ಪ್ರಶ್ನೆ ಬೆಂಗಳೂರು ಪೊಲೀಸ್ರ ಮುಂದೆ ಬಂದಿದೆ. ಬಿಜೋರಾಮ್ ಗುಜರಾತ್ ನಲ್ಲಿ ಅಕ್ರಮ‌ ಹಣ ಸಾಗಣೆ ಕೇಸ್ ನಲ್ಲಿ ಬಂಧಿಯಾಗಿರೋದ್ರಿಂದ ಆತನನ್ನ ಕೋರ್ಟ್ ಮೂಲಕವೇ ಬೆಂಗಳೂರಿಗೆ ಬಾಡಿ ವಾರೆಂಟ್ ಮೇಲೆ ಕರೆತರಬೇಕು.

ಬಾಡಿ ವಾರೆಂಟ್ ಮೇಲೆ ಆರೋಪಿ ಕರೆತಂದ್ರೂ ಕೋರ್ಟ್ ನೀಡಿದ ಗಡುವಿಗೆ ಆರೋಪಿಯನ್ನ ಗುಜರಾತ್ ಕೋರ್ಟ್‌ ಗೆ ಹಾಜರು ಪಡಿಸಬೇಕು. ಇದೆಲ್ಲವನ್ನೂ ಪ್ಲಾನ್ ಮಾಡೇ ಆರೋಪಿ ಬಿಜೋರಾಮ್ ಗುಜರಾತ್ ಪೊಲೀಸ್ರ ಬಲೆಗೆ ಬಿದ್ದಿರೋ ಅನುಮಾನವಿದೆ. ಈ ಎಲ್ಲಾ ಪ್ಲಾನ್ ಮೊದಲೇ ಬಿಜೋರಾಮ್ ಗೆ ಯಾರಾದ್ರೂ ಹೇಳಿಕೊಟ್ಟಿದ್ರಾ? ಅಥವಾ ಬಿಜೋರಾಮ್ ನೇ ಈ ಪ್ಲಾನ್ ಮಾಡಿದ್ನ ಅನ್ನೋದು ನಿಗೂಢವಾಗಿದೆ.

ಇಂದು ಮಧ್ಯಾಹ್ನ ಗುಜರಾತಿನ ಅಮಿರ್ಘಾರ್ ಪೊಲೀಸರಿಂದ‌ ಆರೋಪಿ ಬಂಧನವಾಗಿದ್ದು, ಗುಜರಾತ್ ಪೊಲೀಸರಿಗೆ ಬೆಂಗಳೂರು ಕಮಿಷನರ್ ಪ್ರತಾಪ್ ರೆಡ್ಡಿ 50 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.

Edited By :
PublicNext

PublicNext

30/05/2022 10:37 pm

Cinque Terre

37.68 K

Cinque Terre

0

ಸಂಬಂಧಿತ ಸುದ್ದಿ