ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮುರುಘಾ ಶ್ರೀಗಳೇ ಕೊಳದ ಮಠದ ವಿಚಾರಕ್ಕೆ ಬರಬೇಡಿ ಮರ್ಯಾದೆ ಕಳೆದುಕೊಳ್ತೀರಾ!

ಬೆಂಗಳೂರು: ಕೊಳದ ಮಠದ ವಿವಾದ ಟ್ವಿಸ್ಟ್​ ಮೇಲೆ ಟ್ವಿಸ್ಟ್ ಪಡೆಯುತ್ತಿದ್ದು, ಮರಿಸ್ವಾಮಿ ನೇಮಕ, ಮಠದ ಉತ್ತರದಾಯಿತ್ವ ವಿವಾದಕ್ಕೆ ಸಂಬಂಧಿಸಿದಂತೆ ಲಿಂಗೈಕ್ಯ ಶಾಂತವೀರ ಸ್ವಾಮಿಗಳ ಸಂಬಂಧಿಕರು "ಮುರುಘಾ ಶ್ರೀಗಳೇ ಕೊಳದ ಮಠದ ವಿಚಾರಕ್ಕೆ ಬರಬೇಡಿ" ಕೊಳದ ಮಠಕ್ಕೂ ನಿಮಗೂ ಸಂಬಂಧ ಇಲ್ಲವೇ ಇಲ್ಲ. ಮಠಕ್ಕೆ ನಾವೇ ಪೀಠಾಧ್ಯಕ್ಷರನ್ನ ಆಯ್ಕೆ ಮಾಡಿಕೊಳ್ತೇವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಿಂಗೈಕ್ಯ ಶಾತವೀರ ಸ್ವಾಮೀಜಿಗಳ ಸಂಬಂಧಿಕರು,ನಮ್ಮ ವಂಶಸ್ಥರೇ ಈ ಮಠಕ್ಕೆ ಪೀಠಾಧ್ಯಕ್ಷರಾಗ್ತಾರೆ. ಕೊಳದ ಮಠದ ಆಸ್ತಿ ಒಡೆಯಲು ಹುನ್ನಾರ ನಡೆಯುತ್ತಿದೆ. ಮಠದ ಹೆಸರಲ್ಲಿ ಆಸ್ತಿ ಇರೋದ್ರಿಂದಲೇ ಇವ್ರೆಲ್ಲಾ ಬರ್ತಿದ್ದಾರೆ.

ಕೊಳದ ಮಠವು ಮುರುಘಾ ಮಠದ ಶಾಖೆಯಲ್ಲ ಎಂದು ಕೊಳದ ಮಠದ ಶ್ರೀಗಳ ಸಂಬಂಧಿ ರುದ್ರಾರಾಧ್ಯ ಹೇಳಿದ್ದಾರೆ. ಕೊಳದ ಮಠ ಮಹಾಸಂಸ್ಥಾನ ಎಂಬುದಕ್ಕೆ ದಾಖಲೆ ಇವೆ. ಈ ಹಿಂದೆ ರಾತ್ರೋರಾತ್ರಿ ಪೀಠಾಧ್ಯಕ್ಷರ ಆಯ್ಕೆ ಪಿತೂರಿ ನಡೆದಿತ್ತು. ನಮ್ಮ‌ ಕುಟುಂಬದ ಸದಸ್ಯ ಹರ್ಷ ಎಂಬಾತ ಪಿತೂರಿ ಮಾಡಿದ್ದಾನೆ. ಮುರುಘಾ ಮಠದವರ ಜೊತೆ ಸೇರಿ ಹರ್ಷನಿಂದ ಪಿತೂರಿ ನಡೀತಿದೆ. ಹರ್ಷ ಅವರ ಮಗ ಪೀಠಾಧ್ಯಕ್ಷರಾಗೋದು ನಮಗೆ ಇಷ್ಟ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಶಾತವೀರ ಸ್ವಾಮೀಜಿಗಳ ಸಂಬಂಧಿಕರ ಹೇಳಿದ್ದಾರೆ.

Edited By : Somashekar
Kshetra Samachara

Kshetra Samachara

20/05/2022 02:55 pm

Cinque Terre

4.18 K

Cinque Terre

0

ಸಂಬಂಧಿತ ಸುದ್ದಿ