ಬೆಂಗಳೂರು: ಏಪ್ರಿಲ್ 28 ರಂದು ಮಾಗಡಿ ರಸ್ತೆಯ ಸುಂಕದ ಕಟ್ಟೆ ಬಳಿ ಯುವತಿ ಮೇಲಿನ ಆ್ಯಸಿಡ್ ದಾಳಿ ಘಟನೆ ಇಡೀ ನಗರವನ್ನ ಬೆಚ್ಚಿ ಬೀಳಿಸಿತ್ತು. ವಿಕೃತಿ ಮೆರೆದು ಪೊಲೀಸ್ರ ಕಣ್ತಪ್ಪಿಸಿಕೊಂಡಿದ್ದ ಪಾಪಿ ನಾಗನ ಹೆಡೆಮುರಿಯನ್ನ ಕಾಮಾಕ್ಷಿಪಾಳ್ಯ ಪೊಲೀಸ್ರು ಕಟ್ಟಿಹಾಕಿದ್ದಾರೆ.
ಸುಂಕದಕಟ್ಟೆಯ ಸುಂದರ ಯುವತಿಯನ್ನು ಹುಚ್ಚನಂತೆ ಪ್ರೀತಿಸಿದ್ದ ನಾಗೇಶ್ ಅಲಿಯಾಸ್ ಆ್ಯಸಿಡ್ ನಾಗ, ಆಕೆ ಕೆಲಸ ಮಾಡ್ತಿದ್ದ ಮುತ್ತೂಟ್ ಫಿನ್ ಕಾರ್ಪ್ ಫೈನಾನ್ಸ್ ಕಂಪನಿಯ ಮೆಟ್ಟಿಲುಗಳ ಮೇಲೆಯೇ ಆ್ಯಸಿಡ್ ಎರಚಿ ಎಸ್ಕೇಪ್ ಅಗಿದ್ದ. ಅವತ್ತು ಎಸ್ಕೇಪ್ ಅಗಿದ್ದವನು ಇವತ್ತಿನ ತನಕ ಎಲ್ಲಿ ಹೋದ ಅನ್ನೋದು ಪತ್ತೆ ಇರಲಿಲ್ಲಾ. ಅವನಿಗಾಗಿ ಸುಮಾರು 30 ಪೊಲೀಸರ ಆರು ತಂಡಗಳು ಹಗಲು ರಾತ್ರಿ ಹುಡುಕಿದ್ರು. ಇವತ್ತು ಅಸ್ಪತ್ರೆಯ ಐಸಿಯೂ ನಲ್ಲಿ ಚಿಕಿತ್ಸೆ ಪಡೆಯುತಿದ್ದ ಯುವತಿ ಸಹ ವಾರ್ಡ್ ಗೆ ಶಿಫ್ಟ್ ಆಗಿದ್ಲು, ಈ ದಿನ ಮೂರು ಐವತ್ತರ ಸಮಯದಲ್ಲಿ ಆರೋಪಿ ನಾಗೇಶ್ ನನ್ನ ಕಾಮಾಕ್ಷಿಪಾಳ್ಯ ಪೊಲೀಸ್ರು ಬಂಧಿಸಿದ್ದಾರೆ.
ಮೂಲತಃ ತಮಿಳುನಾಡು ಬಾರ್ಡರ್ ನಲ್ಲಿರೊ ಕೋಡಿಯಾಲ ಎಂಬ ಗ್ರಾಮದವನಾದ ನಾಗೇಶ್‌ಗೆ ತಮಿಳು ಚೆನ್ನಾಗಿಯೇ ಬರ್ತಿತ್ತು.
ಇದ್ರ ಅನುಕೂಲ ಪಡೆದಿದ್ದ ಆರೋಪಿ ನಾಗೇಶ್, ತಮಿಳುನಾಡಿನ ತಿರುವಣ್ಣಾಮಲೈ ನಲ್ಲಿರೊ ರಮಣಾಶ್ರಮಕ್ಕೆ ಹೋಗಿದ್ದನಂತೆ. ಅಲ್ಲಿ ಕಾವಿ ಬಟ್ಟೆಯನ್ನು ಹಣ ಕೊಟ್ಟು ಕೊಂಡು ಖರೀದಿಸಿದ್ದಾನೆ. ನಂತ್ರ ಅಲ್ಲಿ ತಾನೊಬ್ಬ ಸ್ವಾಮೀಜಿ ಯಂತೆ ಪೋಸ್ ಕೊಡುತ್ತಾ ಅಲ್ಲಿಯೇ ಊಟ, ತಿಂಡಿ, ನಿದ್ರೆ, ಎಲ್ಲದಕ್ಕೂ ಉಚಿತವಾಗಿ ಕೊಡುವ ವ್ಯವಸ್ಥೆ ಯನ್ನೆ ಬಳಸಿಕೊಂಡು ಅಲ್ಲಿಯೇ ಇದ್ದನಂತೆ.
ಸದ್ಯ ನಾಗೇಶ್ ನನ್ನು ತಿರುವಣ್ಣಾಮಲೈ ನಿಂದ ಬೆಂಗಳೂರಿಗೆ ಪೊಲೀಸರು ಕರೆತರುತಿದ್ದಾರೆ. ಆರೋಪಿ ರಾತ್ರಿ ಹತ್ತು ವರೆಯಿಂದ ಹನ್ನೊಂದು ಗಂಟೆ ಸಮಯದಲ್ಲಿ ನಗರ ತಲುಪಬಹುದು ಎನ್ನುತ್ತಿವೆ ಪೊಲೀಸ್ ಮೂಲಗಳು. ಆರೋಪಿಯ ಹೆಚ್ಚಿನ ವಿಚಾರಣೆ ಬಳಿಕವೇ ಆತ ಎಲ್ಲಲ್ಲಿ ಹೋಗಿದ್ದಾನೆ. ಏನೆಲ್ಲಾ ಮಾಡಿದ್ದ. ಆತನ ಪ್ಲಾನ್ ಏನಾಗಿತ್ತು ಅನ್ನೊ ಸಂಪೂರ್ಣ ಸತ್ಯ ಹೊರ ಬರಬೇಕಿದೆ.
PublicNext
13/05/2022 09:26 pm