ಬೆಂಗಳೂರು: ಇವರಿಗೆಲ್ಲ ಪೊಲೀಸರು, ಕಾನೂನು ಅಂದ್ರೆ ಭಯಾನೇ ಇಲ್ಲ. ಯಾವುದೋ ಏರಿಯಾದಲ್ಲಿ ಒಂದಿಬ್ಬರು ಹುಡುಗರು ಧಮ್ ಹೊಡ್ಕೊಂಡು ನಿಂತಿದ್ದರೂ ಪೊಲೀಸರಿಗೆ ಮಾಹಿತಿ ಹೋಗುತ್ತೆ. ಕೂಡಲೇ ಸ್ಪಾಟ್‌ಗೆ ಬಂದು ಆ ಹುಡುಗರನ್ನು ಬಡಿದು ಎತ್ತಾಕಿಕೊಂಡು ಹೋಗ್ತಾರೆ. ಆದ್ರೆ ಇಷ್ಟು ದೊಡ್ಡಮಟ್ಟದಲ್ಲಿ ಏರಿಯಾದಲ್ಲಿ ಹವಾ ಸೃಷ್ಟಿ ಮಾಡಿದ್ದರೂ ಪೊಲೀಸರಿಗೆ ಮಾತ್ರ ಮಾಹಿತಿ ಸಿಕ್ಕಿಲ್ವ ಅನ್ನೋದೇ ಪ್ರಶ್ನೆ.
ಈ ವಿಡಿಯೋ ನೋಡಿದ್ರೆ ಯಾವುದೋ ಸಿನಿಮಾ ಶೂಟಿಂಗ್ ಅನ್ಸುತ್ತೆ. ಆದ್ರೆ ಇದು ರೀಲ್ ಅಲ್ಲ ರಿಯಲ್. ನಡು ರಸ್ತೆಯಲ್ಲಿ ರೌಡಿ ಶೀಟರ್‌ನ ಹವಾ ನೋಡಿ ಇಡೀ ಏರಿಯಾಗೆ ಏರಿಯಾನೇ ಸ್ಥಬ್ಧವಾಗಿತ್ತು. ಖಾಕಿ ಬಗ್ಗೆ ಕೇರೇ ಇಲ್ಲದೇ ತಾನೆ ಕಿಲಾಡಿ ಎಂಬಂತೆ ಮೆರೆಯುತ್ತಿರುವ ರೌಡಿ ಬ್ರದರ್ಸ್ ವಿಡಿಯೋ ಇದು.
ವಂಶಪಾರಂಪರ್ಯವಾಗಿ ರೌಡಿಸಂ ಮಾಡಿಕೊಂಡು ಬಂದಿರುವ ರೌಡಿ ಬ್ರದರ್ಸ್ ಸಂಜು, ವೀರು ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಬಳಿ ಹಿಂದೆ ನೂರು ಹುಡುಗ್ರನ್ನ ಹಾಕೊಂಡು ಫುಲ್ ಬಿಲ್ಡಪ್ ಕೊಟ್ಟಿದ್ರು. ಅಂದಹಾಗೆ ಇವರಿಬ್ಬರು ದಿ. ರೌಡಿಶೀಟರ್ ಸ್ಪಾಟ್ ರಾಜನ ಮಕ್ಕಳು. ಇವರ ಅಂಕಲ್ ಕೂಡ ರೌಡಿ ಶೀಟರ್ ಟಾಮಿ ಜಗ್ಗ.
ಸದ್ಯ ಸಿನಿಮಾ ಸ್ಟೈಲ್‌ನಲ್ಲಿ ವಿಡಿಯೋ ಮಾಡಿ ಬಿಲ್ಡಪ್ ತಗೊಂಡಿದ್ದ ರೌಡಿಗಳ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ವಿಡಿಯೋ ವೈರಲ್ ಆದ ನಂತರ ಸಿಸಿಬಿ ಪೊಲೀಸ್ರು ಆರೋಪಿಗಳನ್ನ ಬಂಧಿಸಿದ್ದಾರೆ. ನಾಲ್ಕು ವರ್ಷದಿಂದ ಪೊಲೀಸರಿಂದ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಸಂಜು
ಹಫ್ತಾ ವಸೂಲಿ, ಬೆದರಿಕೆ ಸೇರಿ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
Kshetra Samachara
12/05/2022 05:53 pm