ದೇವನಹಳ್ಳಿ: ಕಾನೂನು ಬಾಹಿರವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದ ಕೆಫೆ ಮೇಲೆ ಕೆಂಪೇಗೌಡ ಏರ್ ಪೋರ್ಟ್ ಪೊಲೀಸರು ದಾಳಿ ನಡೆಸಿದ್ದಾರೆ. ಕೆಫೆಗಾಗಿ ಅನುಮತಿ ಪಡೆದು, ಅಕ್ರಮವಾಗಿ ಹುಕ್ಕಾ ಬಾರ್ ನಡೆಸಲಾಗ್ತಿತ್ತು. ಪೊಲೀಸರ ದಾಳಿ ವೇಳೆ 12 ಹುಕ್ಕಾ ಚಿಲುಮೆ, 12 ಹುಕ್ಕಾ ಪೈಪ್, 15 ಫ್ಲೇವರ್ಸ್, ಸಿಗರೇಟ್ ಪ್ಯಾಕ್ಸ್ ನ ವಶಕ್ಕೆ ಪಡೆಯಲಾಗಿದೆ. ಕಾನೂನು ಬಾಹಿರ ಚಟುವಟಿಕೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಕನ್ನಮಂಗಲ ಗೇಟ್ ಸ್ಕೈವಾಕ್ ಸಮೀಪದ ಕೆಫೆ ಹೈವೆ ಕಾನೂನು ಬಾಹಿರವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗುತ್ತಿದ್ದಂತೆ ದಾಳಿ ನಡೆಸಿದ್ದಾರೆ. ಅಸ್ಸಾಂನ A-1-ಅತೀಕುರ್ ರೆಹಮಾನ್, A-2-ಅಯೂಬ್ ಖಾನ್, A-3 ಹರಿಬಹದೂರ್ ಎಂಬ ಮ್ಯಾನೇಜರ್ ಸೇರಿ ಮೂರು ಜನ ಸಿಬ್ಬಂದಿನ ಬಂಧಿಸಲಾಗಿದೆ. ದಾಳಿ ವೇಳೆ ಹುಕ್ಕಾಬಾರ್ ನಡೆಸುತ್ತಿದ್ದ ಬೆಂಗಳೂರಿನ ಮಾಲೀಕರಾದ ವಾಸೀಂಅಹ್ಮದ್ & ಮೊಹ್ಮದ್ ಸಲ್ಮಾನ್ ಪರಾರಿಯಾಗಿದ್ದಾರೆ. ಇಲ್ಲಿ ಕೆಫೆಗೆ ಮಾತ್ರ ಕನ್ನಮಂಗಲ ಪಂಚಾಯ್ತಿಯಿಂದ ಪರವಾನಿಗೆ ಪಡೆದಿರೋ ಮಾಲೀಕರು ಅಕ್ರಮವಾಗಿ ಹುಕ್ಕಾ ನಡೆಸುತ್ತಿದ್ರು..
ಒಟ್ಟಾರೇ ಕೆಫೆ ಹೆಸರಿನಲ್ಲಿ ಹುಕ್ಕಾಬಾರ್ ನಡೆಸಿ ಪೊಲೀಸರ ಕಣ್ತಪ್ಪಿಸಿ ನಡೆಸುತ್ತಿದ್ದ ದಂಧೆಗೆ ಖಾಕಿ ಈಗ ಪುಲ್ಸ್ಟಾಪ್ ಹಾಕಿದೆ. ಹಾಗೆಯೇ ಅಕ್ರಮ ಹುಕ್ಕಾಬಾರ್ ಗಳ ಲೈಸೆನ್ಸ್ ರದ್ಧತಿಗೆ ಚಿಂತನೆ ನಡೆಸಿದೆ.
PublicNext
10/05/2022 04:55 pm