ಬೆಂಗಳೂರು: ಜೀವನ್ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ರೈಡ್ ಮಾಡಿದ ಪೊಲೀಸರು ಇಬ್ಬರು ಪೆಡ್ಲರ್ ಸೇರಿ 33 ಜನರನ್ನು ಬಂಧಿಸಿದ್ದಾರೆ.
ಓಟೊಸ್ ಹೋಟೆಲ್‌ಲ್ಲಿ ತಡರಾತ್ರಿ ರೇವ್ ಪಾರ್ಟಿ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಪೊಲೀಸರು ಹೋಗಿ ಪರಿಶೀಲಿಸಿದ್ದಾರೆ. ಪಾರ್ಟಿ ಮೂಡ್‌ನಲ್ಲಿದ್ದ 51 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ಪೈಕಿ 31 ಜನ ಡ್ರಗ್ ಪಡೆದಿರುವುದು ಮೆಡಿಕಲ್‌ನಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆ ಡ್ರಗ್ಸ್ ಸೇವಿಸಿದ್ದ 31 ಜನ ಹಾಗೂ ಡ್ರಗ್ ಸಪ್ಲೈ ಮಾಡ್ತಿದ್ದ ಸೆಂಥಿಲ್ ಹಾಗೂ ಹರಿಜೃಷ್ಣ ಎಂಬುವರನ್ನು ಬಂಧಿಸಲಾಗಿದೆ.
ಇನ್ನು ರಾತ್ರಿ 12 ಗಂಟೆ ನಂತರವೂ ಡಿಜೆ ಹಾಕಿ ಪಾರ್ಟಿ ಮಾಡಿದ್ದ ಹೋಟೆಲ್ ಮೇಲೂ ಕೇಸ್ ದಾಖಲಿಸಿದ್ದಾರೆ. ಸ್ಥಳದಲ್ಲಿ ಮೂರು ಲಕ್ಷ ರೂ. ಮೌಲ್ಯದ ಎಂಡಿಎಂಎ, ಚರಸ್, ಗಾಂಜಾ ಸೇರಿದಂತೆ ಮಾಧಕ ವಸ್ತು ಪತ್ತೆಯಾಗಿವೆ.
Kshetra Samachara
09/05/2022 05:18 pm