ಯಲಹಂಕ: ಷೇರ್ ಮಾರ್ಕೆಟ್ ನಲ್ಲಿ ಹಣ ಹೂಡಿದರೆ ಹೆಚ್ಚಿನ ಟಿಪ್ಸ್ ಗಳಿಸಬಹುದು. ಹಾಗೆಯೇ ಷೇರ್ ಎಕ್ಸ್ಚೇಂಜ್ ನಲ್ಲಿ ಹಣ ಹೂಡಿದರೆ ಲಾಭಗಳಿಸಬಹುದೆಂದು ಬಳ್ಳಾರಿ ಗ್ಯಾಂಗ್ ನಂಬಿಸುತ್ತಿತ್ತು. ಈ ಗ್ಯಾಂಗ್ ಅನ್ನ ಈಗ ಯಲಹಂಕ CEN ಪೊಲೀಸರು ಬಂಧಿಸಿದ್ದಾರೆ.
ಯಾರಾದರೂ ನಂಬಿ ಈ ವಂಚಕರಿಗೆ ಸ್ಪಂದಿಸಿದರೆ, ಅವರ ಕಥೆ ಖಲ್ಲಾಸ್. ಹೌದು. ಬಳ್ಳಾರಿ ಜಿಲ್ಲೆ ಶಿರಗುಪ್ಪ ಮೂಲದ 3 ಜನರ ಈ ಗ್ಯಾಂಗ್, ಯಲಹಂಕ ಮೂಲದ ವ್ಯಕ್ತಿಯಿಂದ ಷೇರ್ ಎಕ್ಸ್ಚೇಂಜ್ ನಲ್ಲಿ 2.50.000 ಹೂಡಿಕೆ ಮಾಡಿಸಿದ್ದರು. ಅದರಿಂದ ನಷ್ಟವಾಗಿತ್ತು.
ಇನ್ನು ಸ್ಟಾಕ್ ಮಾರ್ಕೆಟ್ ನಲ್ಲಿ ಹೆಚ್ಚಿನ ಟಿಪ್ಸ್ ಗಳಿಸಬಹುದೆಂದು ನಂಬಿಸಿ ದೂರುದಾರರ ಖಾತೆಯಿಂದ 2.15.000 ಲಕ್ಷ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದರು. ಈ ಬಗ್ಗೆ ಸಂತ್ರಸ್ಥ ಕೇಳಿದರೆ ಸಬೂಬು ನೀಡಿ ಸಿಮ್ ಬದಲಿಸುತ್ತಿದ್ದರು. ಇದರಿಂದ ಕಂಗೆಟ್ಟ ಸಂತ್ರಸ್ಥ ಯಲಹಂಕದ CEN ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನನ್ವಯ ಯಲಹಂಕ CEN ಪೊಲೀಸರು ಬಳ್ಳಾರಿಯ ಸಿರಗುಪ್ಪದಲ್ಲಿ A-1-ರೆಹಮತುಲ್ಲಾ, A-2-ಮಲ್ಲಯ್ಯಸ್ವಾಮಿ, A-3- ದುರ್ಗಪ್ಪ ಎಂಬ 3 ಜನ ಖದೀಮರನ್ನು ಬಂಧಿಸಿದ್ದಾರೆ. ಬಂಧಿತರಿಂದ ವಂಚನೆಗೆ ಬಳಸುತ್ತಿದ್ದ 3 ಮೊಬೈಲ್ , 6ಸಿಮ್ ಕಾರ್ಡ್ ವಶಕ್ಕೆ ಪಡೆಯಲಾಗಿದೆ. ಸಾರ್ವಜನಿಕರು ಹೀಗೆ ವಂಚಕರ ಬಲೆಗೆ ಬೀಳಬಾರದೆಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಜನತೆಗೆ ಎಚ್ಚರಿಕೆ ನೀಡಿದ್ದಾರೆ.
Kshetra Samachara
07/05/2022 01:55 pm