ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಾರಿನಲ್ಲಿದ್ದ ಮೊಬೈಲ್ ಎಗರಿಸಿದ ಯುವಕ; ಸಿಸಿ ಟಿವಿಯಲ್ಲಿ ಸೆರೆ

ದೊಡ್ಡಬಳ್ಳಾಪುರ: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ತೆಂಗಿನ ಕಾಯಿ ಖರೀದಿಗೆ ಬಂದಿದ್ದ ಗ್ರಾಹಕರೊಬ್ಬರು ಕಾರಿನಲ್ಲಿಟ್ಟಿದ್ದ ಸುಮಾರು 11 ಸಾವಿರ ಮೌಲ್ಯದ ಮೊಬೈಲ್ ಅನ್ನು ಯುವಕನೊಬ್ಬ ಕಳವು ಮಾಡಿ, ಪರಾರಿಯಾದ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ತಾಲೂಕಿನ ವಾಣಿಗರಹಳ್ಳಿಯ ನವೀನ್ ಕುಮಾರ್ ಎಂಬವರು, ಕಾರಿನಲ್ಲಿನಲ್ಲಿ ತಾಯಿಯೊಂದಿಗೆ ತೆಂಗಿನ ಕಾಯಿ ಖರೀದಿಗೆ ಬಂದಿದ್ದ ವೇಳೆ ಕಾರಿನಲ್ಲಿ ಮೊಬೈಲ್ ಬಿಟ್ಟು ತೆಂಗಿನ ಕಾಯಿ ವ್ಯಾಪಾರಕ್ಕೆ ತೆರಳಿದ್ದ ವೇಳೆ ಕಳವು ನಡೆದಿತ್ತು.

ಸುಮಾರು 25 ವರ್ಷದ ಯುವಕನೋರ್ವ, ಕಾರಿನಲ್ಲಿದ್ದ ಮೊಬೈಲ್ ಕದ್ದು ದ್ವಿಚಕ್ರ ವಾಹನದಲ್ಲಿ ಪರಾರಿಯಾಗುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತೆಂಗಿನಕಾಯಿ ಖರೀದಿಸಿ ಮರಳಿ ಮನೆಗೆ ತೆರಳುವ ವೇಳೆ ಮೆಸ್ಟ್ರು ಮನೆ ಕ್ರಾಸ್ ಬಂದ ನವೀನ್ ಕುಮಾರ್ ಮೊಬೈಲ್‌ ಹುಡುಕಾಡಿ, ತಾಯಿಯ ಮೊಬೈಲ್ ನಿಂದ ಕರೆ‌ ಮಾಡಿದ್ದು, ಉರ್ದು ಭಾಷೆಯಲ್ಲಿ ಮಾತನಾಡಿದ ಯುವಕ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.

ಹಲವು ಗಂಟೆ ನಿರಂತರವಾಗಿ ಕರೆ ಮಾಡಿ ಮನವಿಗೂ ಬಗ್ಗದ ಯುವಕ, ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಎಪಿಎಂಸಿ ಬಳಿಯ ಮೊಬೈಲ್ ಅಂಗಡಿಗೆ ತೆರಳಿ ವಿಳಾಸ ಬರೆದುಕೊಳ್ಳುವಂತೆ ಮೊಬೈಲ್ ಕೊಟ್ಟು, ಅವರು ಬರೆದುಕೊಳ್ಳುವ ವೇಳೆಗೆ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

Edited By :
Kshetra Samachara

Kshetra Samachara

03/05/2022 04:24 pm

Cinque Terre

2.95 K

Cinque Terre

0

ಸಂಬಂಧಿತ ಸುದ್ದಿ