ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸೂಪರ್ ಮಾರ್ಕೆಟ್ ಗೆ ಹೈಟೆಕ್ ಕಳ್ಳರ ಲಗ್ಗೆ; ಓಲ್ಡ್ ಟೆಕ್ನಿಕ್ ನಿಂದ ನಗದು ಕಳವು

ಬೆಂಗಳೂರು: ಅಬ್ಬಬ್ಬ ಈ ಐನಾತಿಗಳನ್ನು ಒಮ್ಮೆ ಸರಿಯಾಗಿ ನೋಡಿ. ಇವ್ರು ಬರೋದು ಹೈಟೆಕ್ ಕಾರಿನಲ್ಲಿ, ನೋಡೋಕೆ ಹೈ ಫೈ ಹುಡುಗ್ರ ರೀತಿ ಬಟ್ಟೆ ಹಾಕಿರೋ ಇವ್ರು, ಹಳೆ ಕಾಲದಲ್ಲಿ ಕಳ್ಳರು ಮನೆ ಮುರಿಯೋ ರೀತಿ ಶೆಟರ್ ಮುರಿದಿದ್ದಾರೆ. ಅದೂ ಮರದ ತುಂಡು ಬಳಸಿ ಶೆಟರ್ ಮೀಟಿರೋ ಇವ್ರು ತಮ್ಮ ಕೈ ಚಳಕ ತೋರಿರೋದು ಜೆ.ಪಿ. ನಗರದಲ್ಲಿ.

ಜೆ.ಪಿ.ನಗರ 7ನೇ ಫೇಸ್ ನ ಆರ್ ಬಿಐ ಲೇಔಟ್ ನ ಶಾಪ್‌ ಒಂದರಲ್ಲಿ ಹೈಫೈ ಕಾರಲ್ಲಿ‌ ಬಂದು ಕಳ್ಳರು ಕನ್ನ ಹಾಕಿದ್ದಾರೆ. ಮೇ 2ರಂದು ಬೆಳಗಿನ ಜಾವ 3.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಎವರ್ ಫೈನ್ ಸೂಪರ್ ಮಾರ್ಕೆಟ್ ನ ಕ್ಯಾಶ್ ಕೌಂಟರ್ ನಲ್ಲಿದ್ದ 60 ಸಾವಿರ ನಗದು ದೋಚಿದ್ದಾರೆ.

2.45ರ ಹೊತ್ತಿಗೆ ಕಾರಲ್ಲಿ ಬಂದಿಳಿಯುವ ಕಳ್ಳರು, ಸೂಪರ್ ಮಾರ್ಕೆಟ್ ಬಳಿಗೆ ಬಂದು ಬೀಗ ಹಿಡಿದು ನೋಡ್ತಾರೆ‌. ಬೀಗ ಮುರಿಯೋಕೆ ಯಾವುದೇ ಕಟ್ಟರ್ ಬಳಸದ ಖದೀಮರು, ಹೆಗಲ ಮೇಲೆ ಒಂದು ದೊಡ್ಡ ಮರದ ತುಂಡು ತರ್ತಾರೆ. ನಂತರ ಮರದ ತುಂಡಿನ ಸಹಾಯದಿಂದ ಶೆಟರ್ ಮುರಿದು ಒಬ್ಬ ಒಳಗೆ ಹೋಗಿ ಕಳ್ಳತನ‌ ಮಾಡಿ ಬರ್ತಾನೆ. ಕೆಲಸ ಮುಗಿದ ನಂತರ ಮರದ ತುಂಡನ್ನು ಸೂಪರ್ ಮಾರ್ಕೆಟ್ ಬಳಿಯೇ ಇಟ್ಟು ಕಳ್ಳರು ಪರಾರಿಯಾಗಿದ್ದಾರೆ.

ಕಳ್ಳತನದ ಸಂಪೂರ್ಣ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಕೋಣನಕುಂಟೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಕೋಣನಕುಂಟೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹೈಟೆಕ್ ಕಳ್ಳರ ಪತ್ತೆಗೆ ಬಲೆ ಬೀಸಲಾಗಿದೆ.

Edited By :
Kshetra Samachara

Kshetra Samachara

03/05/2022 03:48 pm

Cinque Terre

3.42 K

Cinque Terre

0

ಸಂಬಂಧಿತ ಸುದ್ದಿ