ಬೊಮ್ಮನಹಳ್ಳಿ: ನಗರದ ಮಡಿವಾಳ ಬಳಿ ಕ್ಯಾಬ್ ಡ್ರೈವರ್ ಗೆ ಚಾಕುವಿನಿಂದ ಇರಿದಿದ್ದ ಆರೋಪಿಗಳು ಗುಜರಾತ್ ನಲ್ಲಿ ಮಡಿವಾಳ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಉತ್ತರ ಪ್ರದೇಶದಿಂದ ಸುಲಿಗೆ ಮಾಡಲಿಕ್ಕೆ ಎಂದು ಬಂದಿದ್ದ ಆರೋಪಿಗಳು ಬೊಮ್ಮನಹಳ್ಳಿ ಬಳಿ ಕ್ಯಾಬ್ ಬುಕ್ ಮಾಡಿ ಕ್ಯಾಬ್ ಹತ್ತಿದ್ರು. ಮಡಿವಾಳ ಕಡೆಗೆ ಕ್ಯಾಬ್ ಬರ್ತಿದ್ದಂತೆ ಹಣಕ್ಕೆ ಬೇಡಿಕೆ ಇಟ್ಟು, ಚಾಲಕ ಹಣ ನೀಡದೆ ಇರುವಾಗ ಕಾರು ಚಾಲಕನಿಗೆ ಚಾಕುವಿನಿಂದ ಮೂವತ್ತೆರಡು ಕಡೆ ಇರಿದ್ರು. ಬಳಿಕ ಹನ್ನೆರಡು ಸಾವಿರ ಹಣ ಕಿತ್ತು ಎಸ್ಕೇಪ್ ಆಗಿದ್ರು. ಪೊಲೀಸರೇ ಗಾಯಾಳು ಚಾಲಕನನ್ನು ಅಸ್ಪತ್ರೆಗೆ ದಾಖಲು ಮಾಡಿದ್ರು. ಬಳಿಕ ವಿಚಾರಣೆ ಮಾಡಿದ ಸಮಯದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಲಭ್ಯವಾಗಿತ್ತು.
ಆರೋಪಿಗಳು ಯಶವಂತಪುರ ಬಳಿಯಿಂದ ರೈಲು ಹತ್ತಿ ಬಳಿಕ ಓಲಾ ಬುಕ್ ಮಾಡಿದ್ದ ಮೊಬೈಲ್ ನಂಬರ್ ಸಿಕ್ಕಿದ್ದು, ಮೊಬೈಲ್ ಟವರ್ ಹಾಗು ಟ್ರೈನ್ ಲೊಕೇಶನ್ ಒಟ್ಟಿಗೆ ಬಂದಿತ್ತು. ಒಂದು ಪೊಲೀಸರ ತಂಡ ಫ್ಲೈಟ್ ನಲ್ಲಿ ಆರೋಪಿಗಳನ್ನ ಚೇಸ್ ಮಾಡಿ ಬಳಿಕ ಗುಜರಾತ್ ನ ದಹೇಜ್ ಕೈಗಾರಿಕಾ ಪ್ರದೇಶದಲ್ಲಿ ಆರೋಪಿಗಳನ್ನು ಪತ್ತೆಮಾಡಿದ್ದಾರೆ. ಎರಡು ದಿನದಲ್ಲಿ ಬೆಂಗಳೂರಿಗೆ ಬಂದು ಸುಲಿಗೆಗೆ ಪ್ಲ್ಯಾನ್ ಮಾಡಿ ಕೃತ್ಯ ಎಸಗಿದ್ದ ಆರೋಪಿಗಳಿಬ್ಬರು ಬಾಲಾಪರಾಧಿಗಳಾಗಿದ್ದಾರೆ.
PublicNext
28/04/2022 03:59 pm