ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಬ್ರೇಕಿಂಗ್ ಸಿಲಿಕಾನ್ ಸಿಟಿಯಲ್ಲಿ ಯುವತಿ ಮೇಲೆ ಆ್ಯಸಿಡ್ ಅಟ್ಯಾಕ್..!

ಬೆಂಗಳೂರು : ಬೆಂಗಳೂರಿನ ಸುಂಕದಕಟ್ಟೆಯ ಮುತ್ತೂಟ್ ಫಿನ್ ಕಾರ್ಪ್ ಬಳಿ 23 ವರ್ಷದ ಯುವತಿ ಮೇಲೆ ಆ್ಯಸಿಡ್ ಅಟ್ಯಾಕ್ ನಡೆದಿದೆ. ಈ ಘಟನೆ ಸದ್ಯ ಬೆಂಗಳೂರನ್ನೇ ಬೆಚ್ಚಿಬೀಳಿಸಿದೆ.

ಪಾಗಲ್ ಪ್ರೇಮಿ ನಾಗೇಶ್ ಎಂಬಾತನಿಂದ ಈ ಕೃತ್ಯ ನಡೆದಿದೆ. ಯುವತಿಯನ್ನ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ ಈ ಪಾಗಲ್ ಪ್ರೇಮಿ ಯಾವಾಗ ಯುವತಿ ಈತನ ಪ್ರೀತಿ ನಿರಾಕರಿಸಿದ್ದಾಳೊ ಆಗ ಕೋಪಿತಗೊಂಡು ಆಕೆಯ ಮೇಲೆ ಆ್ಯಸಿಡ್ ಎರಚಿದ್ದಾನೆ.

ಇಂದು ಬೆಳಗ್ಗೆ ಯುವತಿ ಕೆಲಸಕ್ಕೆಂದು ಮುತ್ತೂಟ್ ಫಿನ್ ಕಾರ್ಪ್ ಬಳಿ ಬಂದಾಗ ಈ ಘಟನೆ ಸಂಭವಿಸಿದೆ. ಸದ್ಯ ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿ ನಾಗೇಶನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

Edited By :
PublicNext

PublicNext

28/04/2022 11:21 am

Cinque Terre

40.29 K

Cinque Terre

2

ಸಂಬಂಧಿತ ಸುದ್ದಿ