ಬೆಂಗಳೂರು: ಕೋರ್ಟು-ಕೇಸು ಅಂತ ಸುತ್ತಾಡಿದವರಿಗೆ ಈ ಸ್ಟೋರಿ ನೀಟಾಗಿ ಅರ್ಥ ಆಗುತ್ತೆ. ಯಾಕಂದ್ರೆ ಕೇಸ್ ಗೆ ಜಾಮೀನೂ ನೀಡಲು ಜಮೀನು ಶ್ಯೂರಿಟಿ ಬೇಕು. ಅಂತ ಜಮೀನಿನ ಪತ್ರವನ್ನ ನಕಲಿ ಮಾಡಿ ಯಾರದ್ದೋ ಹೆಸ್ರಿಗೆ ಯಾರದ್ದೋ ಫೋಟೋ ,ಇನ್ಯಾರದ್ದೋ ಆಧಾರ್ ಕಾರ್ಡ್ ತಯಾರು ಮಾಡ್ತಿದ್ದ ಬೃಹತ್ ವಂಚನೆ ಜಾಲವನ್ನ ಸಿಟಿ ಮಾರ್ಕೇಟ್ ಇನ್ಸ್ಪೆಕ್ಟರ್ ಕುಮಾರಸ್ವಾಮಿ ಅಂಡ್ ಟೀಂ ಪತ್ತೆ ಮಾಡಿದೆ.
ಸಿಟಿ ಮಾರ್ಕೆಟ್ ಸರ್ಕಲ್ ನಲ್ಲಿ ಪೊಲೀಸರು ಏಪ್ರಿಲ್ 19 ರ ರಾತ್ರಿ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಓರ್ವ ಪುರುಷ ಮತ್ತು ಹೆಂಗಸಿದ್ದ ಆಟೋ ತಪಾಸಣೆಗೆ ಪೊಲೀಸರು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಆಟೋ ಚಾಲಕ ಇಳಿದು ಓಡಲು ಪ್ರಾರಂಭಿಸಿದ್ದಾನೆ. ಆಟೋ ಚಾಲಕನನ್ನು ಬೆನ್ನತ್ತಿದ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಟೋದಲ್ಲಿ ಸರ್ಕಾರಿ ಸೀಲು ಮತ್ತು ರಾಶಿ, ರಾಶಿ ಡಾಕ್ಯೂಮೆಂಟ್ ಪತ್ತೆ ಯಾಗಿದೆ.
ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ನಕಲಿ ದಾಖಲೆ ಸೃಷ್ಟಿಸಿ ಜೈಲು ಸೇರಿರುವ ಆರೋಪಿ ಜಾಮೀನು ಪಡೆಯಲು ಶ್ಯೂರಿಟಿಯನ್ನು ಕೊಡಬೇಕು. ಶ್ಯೂರಿಟಿ ಕೊಡಲು ಪಹಣಿ ಪತ್ರ, ಆರ್.ಟಿ.ಸಿ ಸೇರಿದಂತೆ ಆಧಾರ್ ಕಾರ್ಡ್ ಮತ್ತು ಜಾಮೀನು ಕೊಡುವ ವ್ಯಕ್ತಿ ನ್ಯಾಯಾಲಯಕ್ಕೆ ಹಾಜರಾಗಬೇಕು.
ಆದರೆ ಈ ಗ್ಯಾಂಗ್ ನವರು ರೈತರ ಹೆಸರಿನಲ್ಲಿರುವ ಪಹಣಿಯನ್ನು ನಕಲು ಮಾಡಿ ಬೇರೊಂದು ಹೆಸರಿಗೆ ಪಹಣಿಯನ್ನು ಸೃಷ್ಟಿಸುತ್ತಿದ್ದರು. ಆರ್.ಟಿ.ಸಿ, ಸಾಲ್ವೆನ್ಸಿ ಸರ್ಟಿಫಿಕೇಟು ಸಹ ನಕಲು ಮಾಡುತ್ತಿದ್ದರು. ಆದರೆ ಇದ್ಯಾವುದು ರೈತರ ಗಮನಕ್ಕೆ ಬರುತ್ತಿರಲಿಲ್ಲ. ರೈತರಿಗೆ ಮೋಸ ಮಾಡುವ ಉದ್ದೇಶವಾಗಿ ಅಸಲಿ ಡಾಕ್ಯೂಮೆಂಟ್ ನ ಬದಲಾವಣೆಯನ್ನು ಮಾಡುತ್ತಿರಲಿಲ್ಲ. ಕೇವಲ ಜಾಮೀನಿಗೆ ಬೇಕಾದಂತೆ ನಕಲಿ ದಾಖಲೆಯನ್ನು ಸೃಷ್ಟಿಸುತ್ತಿದ್ದರು.
ಆಧಾರ್ ಅನ್ನು ನಕಲು ಮಾಡಲು ಕ್ಯೂ ಆರ್ ಕೋಡ್ ಮೇಕರ್ ಎಂಬ ಮೊಬೈಲ್ ಆ್ಯಪ್ ಅನ್ನು ಬಳಕೆ ಮಾಡುತ್ತಿದ್ದರು. ಈ ಮೊಬಲ್ ಆ್ಯಪ್ ಮೂಲಕ ಬೇರೆ ಯಾರದ್ದೋ ಆಧಾರ್ ನಂಬರ್ ನಲ್ಲಿ ತನ್ನ ಫೋಟೋ ಅಡ್ರಸ್ ಬರುವಂತೆ ಮಾಡುತ್ತಿದ್ದರು. ಜಾಮೀನು ನೀಡುವ ವೇಳೆ ನ್ಯಾಯಾಲಯದಲ್ಲಿ ಬಾರ್ ಕೋಡ್ ಸ್ಕ್ಯಾನ್ ಮಾಡಿದಾಗ ಹೆಸರು ಮತ್ತು ಅಡ್ರಸ್ ಮಾತ್ರ ಕಾಣಿಸುತ್ತದೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು ನ್ಯಾಯಾಲಯಕ್ಕೆ ಯಾಮಾರಿಸುತ್ತಿದ್ದರು.
ಇದೇ ವಿಚಾರಕ್ಕೆ ಸಿಟಿ ಮಾರ್ಕೇ್ಟ್ ಪೊಲೀಸ್ರು ಚಿಕ್ಕಬಳ್ಳಾಪುರದಲ್ಲಿ ಹರಿ ಗ್ರಾಫಿಕ್ಸ್ ಎಂಬ ಡಿಟಿಪಿ ಸೆಂಟರ್ ಮೇಲೆ ದಾಳಿ ಮಾಡಿ, ಮಾಲೀಕ ಮಂಜುನಾಥ್ ನನ್ನು ಬಂಧಿಸಿದ್ದಲ್ಲದೇ 1 ಕಂಪ್ಯೂಟರ್, ಪ್ರಿಂಟರ್ ಕಂ ಸ್ಕ್ಯಾನರ್ , 1 ಲ್ಯಾಮಿನೇಷನ್ ಮಿಷನ್ ಅನ್ನು ವಶಕ್ಕೆ ಪಡೆಯಲಾಗಿದೆ.
ಸಿಟಿ ಮಾರ್ಕೆಟ್ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ಮತ್ತು ತಂಡ ಮಹತ್ವದ ಕಾರ್ಯಾಚರಣೆ ನಡೆಸಿ ನ್ಯಾಯಾಂಗಕ್ಕೆ ವಂಚಿಸುತ್ತಿದ್ದ ಪುಟ್ಟಸ್ವಾಮಿ, ನಸ್ರಿನ್, ರಾಜಣ್ಣ, ಮಂಜುನಾಥ್, ಆಂಜಿನಪ್ಪ,ಕುಮಾರ್, ಚಂದ್ರಗೌಡ, ಸೊಣ್ಣೆಗೌಡ, ಟಿ.ಎಂ.ರಾಜಪ್ಪ ಸೇರಿ 9 ಆರೋಪಿಗಳನ್ನು ಬಂಧಿಸುವುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
23/04/2022 06:08 pm