ಯಲಹಂಕ: ಕೇಂದ್ರ ಸರ್ಕಾರದ ಗೇಯ್ಲ್ ಗ್ಯಾಸ್ ಕಂಪನಿಯ ಪೈಪ್ಲೈನ್ ಅಗೆಯುವ ವಿಚಾರಕ್ಕೆ ಅನುಮತಿ ನೀಡಲು ಚಿಕ್ಕಜಾಲ ಟ್ರಾಫಿಕ್ ಇನ್ಸ್ಪೆಕ್ಟರ್ ಹಂಸವೇಣಿ ಲಂಚ ಕೇಳಿದ್ದರು. ಈ ಸಂಬಂಧ ACB ಗೆ ಗ್ಯಾಸ್ ಪೈಪ್ಲೈನ್ ಕಾಮಗಾರಿಯವರು ದೂರು ಕೂಡ ನೀಡಿದ್ದರು. ಅದರಂತೆ ಇಂದು ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ 20 ಸಾವಿರ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳಿಗೆ ಹಣದ ಸಮೇತ ಇನ್ಸ್ಪೆಕ್ಟರ್ ಹಂಸವೇಣಿ ಸಿಕ್ಕಿಬಿದ್ದಾರೆ.
ಇನ್ಸ್ಪೆಕ್ಟರ್ ಹಂಸವೇಣಿ ಕಳೆದ ವರ್ಷದ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಕಳೆದ ಕೆಲವು ದಿನಗಳಿಂದ ರಸ್ತೆ ಅಗಿಯಲು ಅನುಮತಿಗಾಗಿ ಲಂಚಕ್ಕೆ ಬೇಡಿಕೆಯನ್ನೂ ಇನ್ಸ್‌ಪೆಕ್ಟರ್ ಹಂಸವೇಣಿ ಇಟ್ಟಿದ್ದರು.
ಕೇಂದ್ರ ಸರ್ಕಾರದ ಕಾಮಗಾರಿಗೆ ಹಣ ಕೇಳಿದ್ದರಿಂದ ಕಾಮಗಾರಿ ಕಾಂಟ್ರ್ಯಾಕ್ಟರ್ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಯೋಜನೆ ರೀತಿ ಎಸಿಬಿಗೆ ದೂರು ನೀಡಿ, ಇಂದು ಇನ್ಸ್ಪೆಕ್ಟರ್ ರನ್ನ ಲಂಚದ ಖೆಡ್ಡಕ್ಕೆ ಕೆಡವಲಾಗಿದೆ.
SureshBabu Public Next Yalahanka.
PublicNext
20/04/2022 09:48 pm