ಬೆಂಗಳೂರು: ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್ ಆಗಿದ್ದು, ವಿದ್ಯುತ್ ಪರಿವರ್ತಕ ಸ್ಫೋಟಕ್ಕೆ ನಿಖರ ಕಾರಣವೇನು? ಸ್ಫೋಟದ ತೀವ್ರತೆ ಇನ್ನಿತರ ಕಾರಣಗಳ ಅಧ್ಯಯನ ಮಾಡಿ ವರದಿ ನೀಡಲು ಐಐಎಸ್ ಆಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮತ್ತೊಂದೆಡೆ ಸ್ಫೋಟಕ್ಕೆ ನಿಖರ ಕಾರಣ ಕೋರಿ ನೀಡಿದ್ದ ಎರಡು ನೊಟೀಸ್ ಗಳಿಗೂ ಬೆಸ್ಕಾಂ ಹಿರಿಯ ಆಧಿಕಾರಿಗಳು ಪ್ರತಿಕ್ರಿಯಿಸಿಲ್ಲ. ಘಟನೆ ನಡೆದ ಮಾರನೇ ದಿನವೇ ಮೊದಲ ನೊಟೀಸ್ ಕೊಡಲಾಗಿತ್ತು. ನೊಟೀಸ್ ಕೊಟ್ಟು ನಾಲ್ಕು ದಿನ ಉತ್ತರ ನೀಡದಿದ್ದಾಗ ಮತ್ತೊಂದು ನೊಟೀಸ್ ಅನ್ನು ಪೊಲೀಸರು ಜಾರಿ ಮಾಡಿದ್ದರು.ಇದಕ್ಕೆ ಬೆಸ್ಕಾಂ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿಲ್ಲ.
ದುರಂತ ಸಂಬಂಧ ಈಗಾಗಲೇ ಪ್ರಾಥಮಿಕ ತನಿಖೆಯಲ್ಲಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಈ ಹಿನ್ನೆಲೆ ಇಬ್ಬರು ಅಧಿಕಾರಿಗಳನ್ನ ಪೊಲೀಸರು ಬಂಧಿಸಿದ್ದಾರೆ.
Kshetra Samachara
31/03/2022 11:49 am