ಬೆಂಗಳೂರು: ನಗರದ ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ಮಾದಕವಸ್ತು ನಿಗ್ರಹಕ್ಕೆ ವಿನೂತನ ಹೆಜ್ಜೆಯಿಟ್ಟಿದ್ದಾರೆ. ಟ್ರೈನ್ ಮಾಡಿದ ಶ್ವಾನ ದಳ ಬಳಸಿ ಮಾದಕ ವಸ್ತು ಪತ್ತೆಗೆ ಮುಂದಾಗಿದ್ದಾರೆ. ಮೊದಲಿಗೆ ಜಯನಗರ ಠಾಣೆಯಲ್ಲಿ ಈ ಪ್ರಯತ್ನ ಶುರುವಾಗಿದ್ದು, ಖುದ್ದು ಜಯನಗರ ಇನ್ಸ್ ಪೆಕ್ಟರ್ ಮಂಜುನಾಥ್ ಶ್ವಾನ ದಳದ ಜೊತೆ ಮೆಟ್ರೋ ಸ್ಟೇಷನ್, ಬಸ್ ಸ್ಟಾಂಡ್ ನಲ್ಲಿ ತಪಾಸಣೆ ನಡೆಸಿದ್ದಾರೆ.
ವಾರಕ್ಕೊಮ್ಮೆ ಶ್ವಾನ ದಳದಿಂದ ಪರಿಶೀಲನೆ ನಡೆಸುವ ಯೋಜನೆ ರೂಪಿಸಿಕೊಂಡಿದ್ದು, ಇದರಿಂದಾಗಿ ಡ್ರಗ್ ಪೆಡ್ಲರ್ ಅಷ್ಟೇ ಅಲ್ಲದೇ ವ್ಯಸನಿಗಳನ್ನ ಸಹ ಮಟ್ಟಹಾಕುವ ಪ್ರಯತ್ನ ನಡೆಸಿದ್ದಾರೆ. ಈಗಾಗಲೇ ಶ್ವಾನ ದಳ ಪರಿಶೀಲನೆ ವೇಳೆ ಮೂವರು ಡ್ರಗ್ ವ್ಯಸನಿಗಳು ಪತ್ತೆಯಾಗಿದ್ದಾರೆ. ಇನ್ನು ಕಾಲೇಜುಗಳ ಬಳಿ ಸಹ ಪರಿಶೀಲನೆ ನಡೆಸಲು ಪೊಲೀಸರು ಮುಂದಾಗಿದ್ದು ಇದ್ರಿಂದ ವಿದ್ಯಾರ್ಥಿ ವ್ಯಸನಿಗಳ ನಿಗ್ರಹವಾಗುವ ಸಾಧ್ಯತೆಯಿದೆ.
PublicNext
17/03/2022 08:48 pm