ಬೆಂಗಳೂರು: ಬಂಧಿತ ಡ್ರಗ್ ಪೆಡ್ಲರ್‌ಗಳಿದ್ದ ಮನೆ ನೋಡಿ ಹುಳಿಮಾವು ಪೊಲೀಸರಿಗೆ ವಿಚಿತ್ರ ಅನಿಸಿತ್ತು. ಯಾಕಂದ್ರೆ ಆ ಕಪಲ್ ವಾಸವಿದ್ದ ಮನೆಯಲ್ಲಿ ಕಲರ್ ಕಲರ್ ಲೈಟಿಂಗ್ಸ್ ಹಾಕಿದ್ರು. ಚಿತ್ರ ವಿಚಿತ್ರ ಪೇಂಟಿಂಗ್ ರಚಿಸಿದ್ರು. ಇದ್ರ ಹಿಂದಿನ ಅಸಲಿ ಸತ್ಯವೇ ಬೇರೆ. ಯಾಕಂದ್ರೆ ಗಾಂಜ ಸೇವನೆ ನಂತರ ಸೀರಿಯಲ್ ಲೈಟ್ ಮೈಮೇಲೆ ಸುತ್ತಿಕೊಂಡ್ರೆ ನಶೆ ಎರುತ್ತಂತೆ.
ಎಣ್ಣೆ ಬಾಟಲ್ ಹಿಡ್ಕೊಂಡು, ವಾಕ್ ಹೋಗುವಾಗ, ಕಿಕ್ ಡ್ರಗ್ಸ್ ತೆಗೆದುಕೊಳ್ಳುವಾಗ ಪೆಡ್ಲರ್ ದಂಪತಿಯು ಕಲರ್ ಕಲರ್ ಲೈಟ್‌ಗಳನ್ನು ಮೈಮೇಲೆ ಹಾಕಿಕೊಳ್ಳುತ್ತಿದ್ದರಂತೆ. ಈ ನಶೆ ಸಿಕ್ರೇಟ್ ಅನ್ನು ಬಂಧಿತ ದಂಪತಿ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ.
ಸಿಗಿಲ್ ವರ್ಗಿಸ್ ಮತ್ತು ವಿಷ್ಣುಪ್ರಿಯಾ ಇಬ್ಬರೂ ಕೇರಳ ಮೂಲದವರು. ಆದರೆ ವಿಷ್ಣುಪ್ರಿಯ ಬಾಲ್ಯದಲ್ಲಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ಳು. ಅಂದಿನಿಂದ ತಂದೆ ತಮಿಳುನಾಡಿನ ಕೊಯಮತ್ತೂರುಗೆ ಶಿಫ್ಟ್ ಆಗಿದ್ರು. ಅಲ್ಲೇ ತನ್ನ ವಿದ್ಯಾಭ್ಯಾಸ ಕೂಡ ಮುಂದುವರೆಸಿದ್ಳು. ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ವರ್ಗೀಸ್ ಮತ್ತು ವಿಷ್ಣು ಪ್ರಿಯ ನಡುವೆ ಪ್ರೀತಿ ಬೆಳೆದು ಕಾಲೇಜು ದಿನಗಳಿಂದಲೇ ಡ್ರಗ್ಸ್ ದಾಸರಾಗಿದ್ದಳು.
ಡ್ರಗ್ಸ್‌ಗೆ ದಾಸರಾಗಿದ್ದವರು ನಂತರ ಪೆಡ್ಲಿಂಗ್‌ನ ಫುಲ್ ಟೈಂ ಜಾಬ್ ಮಾಡಿಕೊಂಡಿದ್ರು. ಇನ್ನೂ ಮಾದಕ ವಸ್ತುವನ್ನು ಮಾರಾಟ ಮಾಡೋದು ಮಾತ್ರವಲ್ಲ ತಾವೂ ಕೂಡ ಪ್ರತಿ ದಿನ ಸೇವಿಸ್ತಿದ್ರು. ಹೆಚ್ಚಿನ ಕಿಕ್ ಕೊಡ್ಲಿ ಅಂತ ಕತ್ತಲೆ ಕೋಣೆಯಲ್ಲಿ ಮಂದ ಬೆಳಕಿನ ಕಲರ್ ಕಲರ್ ಲೈಟ್‌ಗಳನ್ನು ಹಾಕಿಕೊಂಡಿದ್ರು. ಹೀಗೆ ಕಲರ್ ಕಲರ್ ಲೈಟ್ ನೋಡಿದರೆ ಮತ್ತಷ್ಟು ಕಿಕ್ ಹೆಚ್ಚಾಗತ್ತೆ ಸರ್ ಅಂತ ಖಾಕಿ ಮುಂದೆ ಮತ್ತಿನ ಸಿಕ್ರೇಟ್ ಕೂಡ ಬಾಯ್ಬಿಟ್ಟಿದ್ದಾರೆ. ಸದ್ಯ ಸಿಗಿಲ್ ವರ್ಗಿಸ್ ಮತ್ತು ವಿಷ್ಣುಪ್ರಿಯಾ ಕಪಲ್ ಜೊತೆಗೆ ಪೆಡ್ಲರ್ ವಿಕ್ರಂ ಎಂಬಾತನನ್ನು ಬಂಧಿಸಿರೊ ಹುಳಿಮಾವು ಠಾಣೆ ಪೊಲೀಸರು 8 ಕೋಟಿ ಮೌಲ್ಯದ 12 ಲೀಟರ್ 950 ಗ್ರಾಂ ಹ್ಯಾಶಿಶ್ ಆಯಿಲ್ 26 ಕೆಜಿ 250 ಗ್ರಾಂ ಗಾಂಜಾ ವಶಕ್ಕೆ ಪಡೆದು ಜೈಲಿಗಟ್ಟಿದ್ದಾರೆ.
ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
09/03/2022 04:26 pm