ಬೆಂಗಳೂರು: ನಗರದ ಭೈರಪ್ಪ ಲೇಔಟ್ ನಲ್ಲಿ ತಡರಾತ್ರಿ ತನ್ನ ಪತ್ನಿಯನ್ನೇ ಪತಿ ಕೊಚ್ಚಿ ಕೊಲೆ ಮಾಡಿರೋ ಘಟನೆ ನಡೆದಿದೆ.
ಆಯೇಷಾ ಭಾನು ಎಂಬಾಕೆಯನ್ನ ಆಕೆಯ ಪತಿ ಮುಜಾಮಿಲ್ ಪಾಷಾ ಕೊಂದು, ಕೊಲೆ ಮಾಡಿದ ಮಚ್ಚಿನೊಂದಿ ಪೊಲೀಸ್ರ ಮುಂದೆ ಶರಣಾಗಿದ್ದಾನೆ.
ಮೂಲತಃ ರಾಮನಗರ ನಿವಾಸಿಯಾಗಿರುವ ಆರೋಪಿ, ನಗರದಲ್ಲಿ ಆಟೋ ಓಡಿಸಿಕೊಂಡಿದ್ದ. ಹನ್ನೊಂದು ವರ್ಷದ ಹಿಂದೆ ಆಯೇಷಾ ಭಾನುವನ್ನ ಮದುವೆಯಾಗಿದ್ದ.ಈಗಾಗಲೆ ಈ ದಂಪತಿಗೆ ಮೂರು ಮಕ್ಕಳಿವೆ. ಆದರೆ, ಇತ್ತೀಚೆಗೆ ಗಂಡನಿಗೆ ಆಯೇಷಾ ಭಾನು ದಾಂಪತ್ಯದಲ್ಲಿ ಸಹಕಾರ ನೀಡದ ಹಿನ್ನೆಲೆ ಇಬ್ಬರ ನಡುವೆ ಕಿರಿಕ್ ಗಳು ನಡೆಯುತ್ತಲಿತ್ತು. ಮಕ್ಕಳನ್ನ ಬೇರೆ ಕೊಠಡಿಯಲ್ಲಿ ಮಲಗಿಸಿ ಪತ್ನಿ ಬಳಿ ಬರುತ್ತಿದ್ದವನನ್ನ ಕೀಳಾಗಿ ಬೈಯುತ್ತಿದ್ದಳಂತೆ ಪತಿ ಆಯೇಷಾ.
ಈ ಹಿನ್ನೆಲೆ ಹಿರಿಯರ ನಡುವೆ ರಾಜಿ ಪಂಚಾಯಿತಿ ಕೂಡ ನಡೆಯುತ್ತಿತಿತ್ತಂತೆ. ಆದರೆ ಯಾವುದೂ ಪ್ರಯೋಜನವಾಗಿರಲಿಲ್ಲ. ಪ್ರತಿ ದಿನ ಮನೆಯಲ್ಲಿ ಜಗಳವಿದ್ದ ಕಾರಣ ಮುಜಾಮಿಲ್ ಫ್ರಸ್ಟ್ರೇಷನ್ ಗೆ ಒಳಗಾಗಿದ್ದು, ನಿನ್ನೆ ಕೂಡ ಇದೇ ವಿಚಾರಕ್ಕೆ ಜಗಳ ನಡೆದಿತ್ತು. ಕೊನೆಗೆ ಮಧ್ಯ ರಾತ್ರಿ ಪತ್ನಿಯ ಕತ್ತನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ, ನೇರವಾಗಿ ಪೊಲೀಸ್ ಠಾಣೆಗೆ ಬಂದು ಮುಜಾಮಿಲ್ ಶರಣಾಗಿದ್ದಾನೆ
Kshetra Samachara
26/02/2022 06:51 pm