ಬೆಂಗಳೂರು: ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಕಚೇರಿಯ ಮೂವರು ಸಿಬ್ಬಂದಿ ಹಾಗೂ ಬೆಸ್ಕಾಂ ವಿಜಿಲೆನ್ಸ್ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಜೀವನ್ ಭೀಮಾ ನಗರದ ಬಿಬಿಎಂಪಿ ಸಹಾಯಕ ಕಂದಾಯ ಕಚೇರಿ ಅಧಿಕಾರಿ ಮತ್ತು ಸಿಬ್ಬಂದಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲಾಕ್ ಆಗಿದ್ದಾರೆ.
ʼಎʼ ಖಾತೆ ಮಾಡಿಕೊಡಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ದೂರುದಾರರಿಗೆ 1 ಲಕ್ಷದ 40 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಸಹಾಯ ಕಂದಾಯ ಕಚೇರಿಯಲ್ಲಿ ಎಆರ್ ಒ ಆಗಿ ಕೆಲ್ಸ ಮಾಡ್ತಿದ್ದ ಅಧಿಕಾರಿ ಮೂರ್ತಿ, ಆರ್ .ಇ. ಮಹಮ್ಮದ್ ಇದ್ರಿಸ್ ಎಸಿಬಿ ಕಣ್ಣಿಗೆ ಬಿದ್ದವರು.
ಬ್ರೋಕರ್ ಶ್ರೀನಿವಾಸ್ ಮೂಲಕ 1 ಲಕ್ಷದ 10 ಸಾವಿರ ಲಂಚದ ಹಣ ತೆಗೆದುಕೊಳ್ಳುವಾಗ ಅಧಿಕಾರಿಗಳು ದಾಳಿ ನಡೆಸಿದ್ರು. ದಾಳಿ ವೇಳೆ ಮತ್ತೋರ್ವ ಆರೋಪಿ ಬಿಬಿಎಂಪಿ ವಾರ್ಡ್ ನಂ. 13ರ ಬಿಲ್ ಕಲೆಕ್ಟರ್ ಮೂರ್ತಿ ಪರಾರಿಯಾಗಿದ್ದಾನೆ.
ಮತ್ತೊಂದು ದಾಳಿಯಲ್ಲಿ ಬೆಸ್ಕಾಂ ವಿಜಿಲೆನ್ಸ್ ಎಇಇ ನಾಗೇಶ್ ಸೇರಿ ಮೂವರು ಎಸಿಬಿ ಬಲೆಗೆ ಬಿದ್ದಿದ್ದು, ಎಇಇ ನಾಗೇಶ್, ಪೊಲೀಸ್ ಕಾನ್ಸ್ ಟೇಬಲ್ ಜಗದೀಶ್ ಹಾಗೂ ಆರಿಫ್ ಟ್ರ್ಯಾಪ್ ಆಗಿದ್ದಾರೆ.
ಮಲ್ಲೇಶ್ವರಂ ಸಂಪಿಗೆ ರಸ್ತೆ ಬಳಿಯ ಬೆಸ್ಕಾಂ ಕಚೇರಿಯಲ್ಲಿ ಕಾನೂನು ಬಾಹಿರ ವಿದ್ಯುತ್ ಕನೆಕ್ಷನ್ ತೆರವುಗೊಳಿಸೋದಾಗಿ ಹೇಳಿದ್ದ ನಾಗೇಶ್, ಇದಕ್ಕೆ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಇಇ ಅದಕ್ಕಾಗಿ ಈ ಹಿಂದೆಯೇ 50 ಸಾವಿರ ಮುಂಗಡವಾಗಿ ಪಡೆದಿದ್ರು. ಬಾಕಿ 45 ಸಾವಿರ ರೂ. ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
Kshetra Samachara
22/02/2022 10:50 pm