ಸಿಟಿಯಲ್ಲಿ ಯಾರೂ ಏನನ್ನೇ ಕಳೆದುಕೊಂಡ್ರು ಪೊಲೀಸ್ರ ಹತ್ರ ಬರ್ತಾರೆ. ಆದ್ರೆ, ಈ ಸ್ಟೋರಿಲಿ ಸಂಚಾರಿ ಪೊಲೀಸ್ರು, ಸೀನಿಯರ್ ಆಫೀಸರ್ಸ್ ಹತ್ರ ನಿತ್ಯ ಒಂದು ಕಂಪ್ಲೈಂಟ್ ಹೇಳ್ತಿದ್ರು... ಅದು ಸಿಗ್ನಲ್ ಲೈಟ್ ಬ್ಯಾಟರಿ ಥೆಫ್ಟ್ ಆಗಿದೆ. ಹೀಗೆ ದಿನಕ್ಕೊಂದು ಸಿಗ್ನಲ್ ನಲ್ಲಿ ಬ್ಯಾಟರಿ ಥೆಫ್ಟ್ ಬಗ್ಗೆ ರಿಪೋರ್ಟ್ ಆಗ್ತಿತ್ತು!
ಸಾಕಷ್ಟು ದಿನಗಳಿಂದ ಮಿಸ್ ಆಗ್ತಿದ್ದ ಸಿಗ್ನಲ್ ಬ್ಯಾಟರಿ ಕೊನೆಗೂ ಪತ್ತೆಯಾಗಿದೆ. ಅದೂ ಒಂದಲ್ಲ, ಎರಡಲ್ಲ ಬರೋಬ್ಬರಿ 230. ಇನ್ನು, ಈ ಬ್ಯಾಟರಿ ಕಳವು ಮಾಡ್ತಿದ್ದು ಗಂಡ- ಹೆಂಡತಿ! ಮುಂಜಾವ 3ರಿಂದ 5 ಗಂಟೆಯೊಳಗೆ ಆಪರೇಟ್ ಮಾಡ್ತಿದ್ದ ಈ ಜೋಡಿ ಟಿವಿ ಎಸ್ ಎನ್ ಟಾರ್ಕ್ ಬೈಕ್ ನಲ್ಲಿ ಕಟರ್ ಸಮೇತ ಸ್ಪಾಟ್ ಗೆ ಬರ್ತಿದ್ರು. ಸಿಗ್ನಲ್ ಕಂಬದಲ್ಲಿ ವಯರ್ ಕಟ್ ಮಾಡಿ ಬ್ಯಾಟರಿ ಎತ್ತಿಕೊಂಡು ಅಬೇಸ್ ಆಗ್ತಿದ್ರು. ಈ ದಂಪತಿ ಹೆಸ್ರು ಸಿಕಂದರ್ ಮತ್ತು ನಜ್ಮಾ.
ಇವ್ರ ಪತ್ತೆಗೆ ಅಶೋಕನಗರ ಇನ್ ಸ್ಪೆಕ್ಟರ್ ಮಲ್ಲೇಶ್ ಬೊಳೆತ್ತಿನ್ ಆಂಡ್ ಟೀಂ 2 ವಾರ ಸಿಗ್ನಲ್ ಕಂಬ ವಾಚ್ ಮಾಡಿದ್ರು. ಎಎಸ್ ಐ ದೇವರಾಜ್ 2 ವಾರ ನಗರದಲ್ಲಿ ಇರೋ 4 ಸಾವಿರ ಎನ್ ಟಾರ್ಕ್ ಬೈಕ್ ಹಿಂದೆ ಬಿದ್ರು. ಕೊನೆಗೆ ಯಶವಂತಪುರ ಭಾಗದ 300 ಬೈಕ್ ಶಾರ್ಟ್ ಲಿಸ್ಟ್ ಮಾಡಿ ಈ ಜೋಡಿಯನ್ನ ಲಾಕ್ ಮಾಡಿ 20 ಲಕ್ಷ ಮೌಲ್ಯದ 230 ಬ್ಯಾಟರಿ ಸೀಜ್ ಮಾಡಿದ್ದಾರೆ.
7 ಸಾವಿರ ಮೌಲ್ಯದ ಬ್ಯಾಟರಿ ಕೇವಲ ಸಾವಿರಕ್ಕೆ ಮಾರಾಟ ಮಾಡ್ತಿದ್ದ ಈ ದಂಪತಿ, ಈ ಹಿಂದೆ ಲಾಕ್ ಡೌನ್ ನಲ್ಲಿ ಹಲವು ಬಾರಿ ಪೊಲೀಸ್ರು ಚೆಕ್ ಮಾಡಿದಾಗ ʼಸಾರ್, ನಾವು ತರಕಾರಿ ಮಾರೋರು. ಬೇಕಾದ್ರೆ ಬ್ಯಾಟರಿ ನೋಡಿʼ ಎಂದು ಕದ್ದ ಬ್ಯಾಟರಿಯನ್ನೇ ತೋರಿಸಿ ಎಸ್ಕೇಪ್ ಆಗಿದ್ರು! ರಾತ್ರಿ ವೇಳೆ ಟೀ ವ್ಯಾಪಾರವನ್ನೂ ಮಾಡ್ತಿದ್ದು, ಕೆಲ ಬಾರಿ ಪೊಲೀಸ್ರು ಟೀ ಫ್ಲಾಸ್ಕ್ ಒಡೆದು
ಹಾಕಿದ್ರಂತೆ. ಈ ಕೋಪಕ್ಕೆ ಚೋರತನ ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾರೆ.
Kshetra Samachara
16/02/2022 11:39 am