ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಚಂದ್ರಾಲೇಔಟ್ ಶಾಲೆಯ ಗಲಾಟೆ ಕುರಿತು ಕಮಿಷನರ್ ಕಮಲ್ ಪಂತ್ ಸ್ಪಷ್ಟನೆ

ಬೆಂಗಳೂರು: ಚಂದ್ರಾಲೇಔಟ್ ಖಾಸಗಿ ಶಾಲೆಯಲ್ಲಿ ಹಿಜಾಬ್ ಗಲಾಟೆ ವಿಚಾರ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಪಷ್ಟನೆ ನೀಡಿದ್ದಾರೆ.

ಬೆಳಗ್ಗೆ ಸುಮಾರು 30-40 ಪೋಷಕರು ಶಾಲೆ ಬಳಿ ಬಂದಿದ್ದಾರೆ.ನಿನ್ನೆ ಹೈಕೋರ್ಟ್ ಆದೇಶ ಏನ್ ಬಂದಿದೆ ಅದನ್ನ ಮಕ್ಕಳ ಪೋಷಕರಿಗೆ ಈಗಾಗಲೇ ಹೇಳಿದ್ದೀವೆ‌ ಎಂದು ಕಮಲ್ ಪಂತ್ ತಿಳಿಸಿದ್ದಾರೆ.

ನಮ್ಮ ಪೊಲೀಸರು ಪೋಷಕರನ್ನ ಸಮಾಧಾನ ಮಾಡಿ ಕಳುಹಿಸಿದ್ದಾರೆ.ಯಾರು ಈ ಬಗ್ಗೆ ದೂರು ಕೊಟ್ಟಿಲ್ಲ.ಯಾವುದೇ ಗಲಾಟೆ ಸಹ ನಡೆದಿಲ್ಲ‌.ಶಾಲೆ ಬಗ್ಗೆ ಆಗಲಿ, ಪೋಷಕರ ಮೇಲೆ ಆಗಲಿ ಕ್ರಮ ಆಗಿಲ್ಲ.ಈ ಬಗ್ಗೆ ಯಾರಾದರೂ ದೂರು ಕೊಟ್ಟರೆ, ಕ್ರಮ ಕೈಗೊಳ್ಳುತ್ತೇವೆ ಎಂದರು ಕಮಲ್ ಪಂತ್.

ಹಿಜಾಬ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ಇಲ್ಲವೇ ವಿರೋಧವಾಗಿಯೇ ಪೋಸ್ಟ್ ಮಾಡಿದರೇ, ಅಂತವರ ವಿರುದ್ಧ ಕ್ರಮ‌ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ರು.

Edited By : Manjunath H D
PublicNext

PublicNext

12/02/2022 03:45 pm

Cinque Terre

30.55 K

Cinque Terre

0

ಸಂಬಂಧಿತ ಸುದ್ದಿ