ಬೆಂಗಳೂರು: ತಮ್ಮ ಮೇಲೆ ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ ಎಂದು ಶಾಸಕ ರಾಜಕುಮಾರ್ ಅವರು ವಿಧಾನಸೌಧ ಠಾಣೆಗೆ ಶಾಸಕ ದೂರು ನೀಡಿದ್ದರು. ದೂರಿನ ಆಧಾರಿತವಾಗಿ ಪೊಲೀಸರು ಮಹಿಳೆಯನ್ನು ವಿಚಾರಣೆ ನಡೆಸಿದ್ದಾರೆ. ಸುಮಾರು ಆರು ಗಂಟೆ ವಿಚಾರಣೆ ನಡೆಸಿದ ವಿಧಾನಸೌಧ ಪೊಲೀಸ್ರು ಮಹಿಳೆಯ ಹೇಳಿಕೆ ದಾಖಲಿಸಿದ್ದಾರೆ.
ಇನ್ನು ಮಹಿಳೆ ಪರ ವಕೀಲ ಜಗದೀಶ್ ಮಾತನಾಡಿ ನಮ್ಮಲ್ಲಿ ಇರುವ ಮಾಹಿತಿಯನ್ನು ಪೊಲೀಸ್ರಿಗೆ ಕೊಟ್ಟಿದ್ದೇವೆ. ಸಿಬಿಐಯಲ್ಲಿ ಶಾಸಕರ ವಿರುದ್ಧ ಚೀಟಿಂಗ್, ಪೋರ್ಜರಿ ಕೇಸ್ ಕೂಡ ಇದೆ. ಮೆಸೆಂಜರ್‌ನಲ್ಲಿ ಮೆಸೇಜಸ್ ಮಾಹಿತಿ ಇದೆ. ನಾವು ಕೂಡ ನಮ್ಮದೇ ಆದ ತನಿಖೆಯನ್ನ ಮಾಡಿದ್ದೇವೆ. ಆದ್ರೆ ನಮಗೆ ಪೊಲೀಸರ ಮೇಲೆ ನಂಬಿಕೆ ಇಲ್ಲ. ಇಲ್ಲಿ ನಮ್ಮ ಕಕ್ಷಿದಾರೆಗೆ ಪೊಲೀಸರು ಎರಡು ಕೋಟಿ ಆಫರ್ ಮಾಡಿದ್ದಾರೆ ಎಂದು ಜಗದೀಶ್ ಆರೋಪಿಸಿದ್ದಾರೆ. ಅಲ್ಲದೆ ಪೊಲೀಸರು ಯಾರದ್ದೋ ಒತ್ತಡಕ್ಕೆ ಮಣಿದು ಕೆಲಸ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.
PublicNext
08/02/2022 08:58 pm