ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮನೆಯ ಮೇಲೆ ಹಾರಿಸಿದ್ದು ಮೊಹರಂ ಬಾವುಟ ಐಸಿಸ್ ಧ್ವಜವಲ್ಲ

ದೊಡ್ಡಬಳ್ಳಾಪುರ : ಮನೆಯ ಮೇಲೆ ಮೊಹರಂ ಧ್ವಜವನ್ನ ಹಾರಿಸಲಾಗಿತ್ತು, ಆದರೆ ಕಿಡಿಗೇಡಿಯೊಬ್ಬ ಮೊಹರಂ ಬಾವುಟವನ್ನ ಐಸಿಸ್ ಧ್ವಜವೆಂದು ವಿಡಿಯೋ ಮಾಡಿ ವೈರಲ್ ಮಾಡಿದ್ದ, ಇದರಿಂದ ನಗರದಲ್ಲಿ ಆತಂಕ ವಾತಾವರಣ ಉಂಟು ಮಾಡಿತು.

ದೊಡ್ಡಬಳ್ಳಾಪುರ ಪೊಲೀಸರು ಮತ್ತು ಮುಸ್ಲಿಂ ಯುವಕರ ಸಮಯ ಪ್ರಜ್ಞೆಯಿಂದ ಆತಂಕವನ್ನ ದೂರ ಮಾಡಿ ಅಸಲಿ ಮಾಹಿತಿಯನ್ನ ಜನರಿಗೆ ತಿಳಿಸಿದ್ದಾರೆ.

ಮೊಹರಂ ಆಚರಣೆಯ ಸಮಯದಲ್ಲಿ ಮುಸ್ಲಿಂ ಸಮುದಾಯದವರು ತಮ್ಮ ಮನೆಯ ಮೇಲೆ ಮೊಹರಂ ಬಾವುಟವನ್ನ ಹಾರಿಸುವುದು ಸಾಮಾನ್ಯ , ಕಪ್ಪು ಬಣ್ಣದ ಬಾವುಟದಲ್ಲಿ ಯಾ ಹುಸೇನ್ ಎಂಬ ಬರಹ ಬರೆಯಲಾಗಿರುತ್ತೆ, ಮಹಮ್ಮದ್ ಪೈಗಂಬರ್ ರವರ ಮೊಮ್ಮಗನ ಹೆಸರಾಗಿರುತ್ತೆ, ದೊಡ್ಡಬಳ್ಳಾಪುರ ನಗರದ ಮಾರುತಿ ನಗರದಲ್ಲಿ ಮುಸ್ಲಿಂ ಯೂವಕನೊಬ್ಬ ತನ್ನ ಮನೆಯ ಮೇಲೆ ಯಾ ಹುಸೇನ್ ಬರಹವಿರುವ ಕಪ್ಪು ಬಾವುಟವನ್ನ ಹಾರಿಸಿದ್ದ.

ಇದೇ ಸಮಯದಲ್ಲಿ ದೇಶ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿತ್ತು, ಎಲ್ಲರ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಲಾಗಿತ್ತು, ತ್ರಿವರ್ಣ ಧ್ವಜಗಳ ನಡುವೆ ಹಾರಾಡುತ್ತಿದ್ದ ಮೊಹರಂ ಬಾವುಟವನ್ನ ಕಿಡಿಗೇಡಿಯೊಬ್ಬ ಐಸಿಸ್ ಧ್ವಜವೆಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಇದರಿಂದ ದೊಡ್ಡಬಳ್ಳಾಪುರ ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ತಕ್ಷಣವೇ ಎಚ್ಚೆತ್ತ ದೊಡ್ಡಬಳ್ಳಾಪುರ ಪೊಲೀಸರು ಮೊಹರಂ ಬಾವುಟ ಹಾರಿಸಿದ ಯುವಕನನ್ನ ಪತ್ತೆ ಮಾಡಿ ಬಾವುಟವನ್ನು ಕೆಳಗೆ ಇಳಿಸಿದರು. ವಿಚಾರಣೆ ಸಮಯದಲ್ಲಿ ಯುವಕ ಹಾರಿಸಿದ ಬಾವುಟ ಐಸಿಸ್ ಬಾವುಟ ಅಲ್ಲ ಮೊಹರಂ ಬಾವುಟ ಎಂಬ ಸಂತ್ಯಾಂಶ ಸಹ ಬೆಳಕಿಗೆ ಬಂದಿದೆ, ಇದಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಯುವಕರು ಸಹ ಬಾವುಟದ ಅಸಲಿಯತ್ತನ್ನು ವಿವರಣೆಯೊಂದಿಗೆ ಮಾಧ್ಯಮದ ಮುಂದೆ ವಿವರಿಸಿದ್ದಾರೆ.

Edited By :
PublicNext

PublicNext

17/08/2022 08:15 pm

Cinque Terre

34.27 K

Cinque Terre

0

ಸಂಬಂಧಿತ ಸುದ್ದಿ