ಮಕ್ಕಳಿಗೆ ಮೈ ತುಂಬ ಚಿನ್ನಾಭರಣ ಹಾಕುವ ಪೋಷಕರು ಈ ಸುದ್ದಿಯನ್ನು ನೋಡಲೇಬೇಕು. ಮಕ್ಕಳ ಮೇಮೇಲೆ ಚಿನ್ನ ಹಾಕಿದ ಮೇಲೆ ಅವರೊಂದಿಗೆ ಪೋಷಕರು ಇರಬೇಕು. ಇಲ್ಲದಿದ್ರೆ ನಿಮ್ಮ ಮಕ್ಕಳ ಮೇಲಿನ ಬಂಗಾರ ಗೋವಿಂದ... ಗೋವಿಂದಾ...
ಎಸ್... ಕಲ್ಯಾಣ ಮಂಟಪದಲ್ಲಿ ಕಣ್ಣಾಮುಚ್ಚಾಲೆ ಆಡೋಣ ಬಾರೋ ಅಂತ ಕರೆದು ಉದ್ಯಮಿ ಮಗನ ಮೈ ಮೇಲಿದ್ದ ಚಿನ್ನಾಭರಣಗಳನ್ನು ಐನಾತಿ ಕಳ್ಳರು ದೋಚಿಕೊಂಡು ಎಸ್ಕೇಪ್ ಆಗಿದ್ದಾರೆ. ಫಂಕ್ಷನ್‌ಗಳಲ್ಲಿ ಮಕ್ಕಳ ಮೈ ಮೇಲೆ ಚಿನ್ನ ಹಾಕುವ ಪೋಷಕರೇ.. ನೀವು ಎಚ್ಚರ ವಹಿಸದಿದ್ರೆ ನಿಮ್ಮ ಒಡವೆ ಕೂಡ ಮಿಸ್ ಆಗೋ ಸಾಧ್ಯತೆಯಿದೆ. ಮಾಗಡಿ ರಸ್ತೆಯ ಸರಸ್ವತಿ ಕನ್ವೆನ್ಷನ್ ಹಾಲ್‌ನಲ್ಲಿ ಇಂತಹದೊಂದು ಘಟನೆ ನಟೆದಿದೆ. ಮಕ್ಕಳ ಜೊತೆ ಕಳ್ಳರು ಸೇರಿಕೊಂಡು ಹೈಡ್ ಆಂಡ್ ಸೀಕ್ ಆಟ ಆಡೋಣ ಅಂತ 6ವರ್ಷದ ಹುಡುಗನ ಮೈ ಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಉದ್ಯಮಿ ರಾಘವೇಂದ್ರ ಎಂಬಾತರು ಕುಟುಂಬ ಸಮೇತ ಮದುವೆಗೆ ಬಂದಿದ್ದರು. ಈ ವೇಳೆ ಅವರ ಮಗನ ಮೈ ಮೇಲೆ ಮೂರುವರೆ ಲಕ್ಷ ಮೌಲ್ಯದ 79 ಗ್ರಾಂ ಚಿನ್ನಾಭರಣ ಹಾಕಿದ್ರು. ಇದನ್ನ ಗಮನಸಿದ ಕಳ್ಳರು ಬಾಲಕನನ್ನು ಹಿಂಬಾಲಿಸಿ ಆತ ಹೊರಗಡೆ ಬಂದಾಗ ಕಣ್ಣಾಮುಚ್ಚಾಲೆ ಆಡೋಣ ಅಂತ ಕತ್ತಲಲ್ಲಿ ಕರೆದೊಯ್ದು ಚೈನ್ , ಉಂಗುರ ಮತ್ರು ಕೈ ಚೈನ್ ಕಸಿದು ಪರಾರಿಯಾಗಿದ್ದಾರೆ. ಚಿನ್ನ ಕದ್ದು ಇಬ್ಬರು ಬೈಕ್‌ನಲ್ಲಿ ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಗೋವಿಂದರಾಜನಗರ ಠಾಣೆಗೆ ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
PublicNext
23/05/2022 04:12 pm