ಕ್ಲಬ್ ಹೌಸ್ ಗ್ರೂಪ್ ಡಿಪಿಯಲ್ಲಿ ಪಾಕಿಸ್ತಾನದ ರಾಷ್ಟ್ರಧ್ವಜ ಹಾಕಿ ದೇಶಕ್ಕೆ ಅಗೌರವ ತೋರಿಸಿದ್ದ ಆರೋಪದಡಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಗಸ್ಟ್ 14 ರಂದು ಕ್ಲಬ್ ಹೌಸ್ ಗ್ರೂಪ್ ಡಿಪಿಯಲ್ಲಿ ಪಾಕಿಸ್ತಾನದ ಧ್ವಜ ಹಾಕಿ ರಾಷ್ಟ್ರಗೀತೆಯನ್ನು ಮೊಳಗಿಸಿ ದೇಶಕ್ಕೆ ಅಗೌರವ ಸೂಚಿಸಿದ್ದರು. ಪಾಕಿಸ್ತಾನ ಪರ ಜಿಂದಾಬಾದ್ ಎಂದು ಕೂಗಿದ್ದರು. ಪ್ರತಿಯೊಬ್ಬರು ಪಾಕಿಸ್ತಾನದ ಬಾವುಟವನ್ನ ಡಿಪಿಯಲ್ಲಿ ಹಾಕುವಂತೆ ಪ್ರಚೋದಿಸಿದ್ರು.
ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಪಾಕಿಸ್ತಾನ ಪರ ರಾಷ್ಟ್ರ ಧ್ವಜ ಡಿಪಿಯಲ್ಲಿ ಹಾಕಿರುವ ವಿಚಾರ ಗಮನಕ್ಕೆ ಬಂದಿದೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ. ಇನ್ನೂ ಯಾರನ್ನು ವಶಕ್ಕೆ ಪಡೆದಿಲ್ಲ. ಕ್ಲಬ್ ಹೌಸ್ ನ ಸದಸ್ಯರು ನಿಕ್ ನೇಮ್ ಬಳಸಿ ಕೃತ್ಯ ಎಸಗಿದ್ದಾರೆ. ಅದರ ಬಗ್ಗೆ ಎಲ್ಲಾ ಮಾಹಿತಿಗಳನ್ನ ಕಲೆ ಹಾಕಲಾಗ್ತಿದೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ನಮಗೆ ಕೆಲವು ಮಾಹಿತಿ ಸಿಕ್ಕಿದ್ದು ಪರಿಶೀಲನೆ ನಡೆಸಲಾಗುತ್ತಿದೆ ಎಂದರು. ಕೃತ್ಯ ಎಸಗಿರುವ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದೆ. ಅವರನ್ನ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
PublicNext
17/08/2022 06:35 pm