ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಂದಿಬೆಟ್ಟ ಬುಡದಲ್ಲಿ ಹೊಗೆಕಾಂಡ!; ಆತಂಕದಲ್ಲಿ ವೀಕೆಂಡ್ ಪ್ರವಾಸಿಗರು

ಬೆಂಗಳೂರು: ನಂದಿಬೆಟ್ಟ ಬುಡದಲ್ಲಿ ಹೊಗೆಕಾಂಡ!; ಆತಂಕದಲ್ಲಿ ವೀಕೆಂಡ್ ಪ್ರವಾಸಿಗರು

ಬೆಂಗಳೂರು: ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ವೀಕೆಂಡ್ ಪಿಕ್ನಿಕ್ ಪ್ರವಾಸಿಗರಿಗೆ ನಂದಿಬೆಟ್ಟ ಅತ್ಯದ್ಭುತ ಪ್ರವಾಸಿ ತಾಣ.

ಮೋಡಗಳ ಮರೆಯಲಿ, ತಂಪನೆಯ ತಂಗಾಳಿಲಿ, ಬೆಟ್ಟ ಕಣಿವೆಗಳ ಇಳಿಜಾರಿನಲಿ, ನಂದಿಬೆಟ್ಟದ ಪಯಣ ರೋಮಾಂಚಕ. ಆದರೆ, ದುರಂತವೆಂಬಂತೆ ನಂದಿಬೆಟ್ಟ ಹಾಗೂ ಎದುರಿಗಿರುವ ಗೋಪಿನಾಥ ಬೆಟ್ಟಗಳ ಬುಡದಲ್ಲೇ ನೀಲಗಿರಿ ಸುಗಂಧ ದ್ರವ್ಯ ತೆಗೆಯುವ ಫ್ಯಾಕ್ಟರಿಗಳು ಬಿಡುತ್ತಿರುವ ಹೊಗೆ ಕಿ.ಮೀ.ಗಟ್ಟಲೆ ಪರಿಸರವನ್ನು ನಾಶ ಮಾಡುತ್ತಿದೆ!

ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯ್ತಿಯಾಗಲಿ, ಚಿಕ್ಕಬಳ್ಳಾಪುರ ಜಿಲ್ಲಾಡಳಿತವಾಗಲಿ ಪರಿಸರ ಮಾಲಿನ್ಯ ಎಸಗುತ್ತಿರುವ ಫ್ಯಾಕ್ಟರಿಗಳ ಮೇಲೆ ಏಕೆ ಕಾನೂನು ಕ್ರಮ ಜರುಗಿಸುತ್ತಿಲ್ಲ ಎಂಬುದೇ ಯಕ್ಷ ಪ್ರಶ್ನೆ !?

Edited By : Somashekar
Kshetra Samachara

Kshetra Samachara

19/06/2022 07:55 pm

Cinque Terre

7.29 K

Cinque Terre

1

ಸಂಬಂಧಿತ ಸುದ್ದಿ