ಬೆಂಗಳೂರು: ಇದು ಸಿಲಿಕಾನ್ ಸಿಟಿ ಜನ ತಲೆ ತಗ್ಗಿಸುವಂತ ಹೀನ ಕೃತ್ಯ. ಕೆಲಸ ಕೊಡಿಸುವುದಾಗಿ ದೂರದೂರಿನಿಂದ ಯುವತಿಯನ್ನ ಕರೆತಂದು ವೇಶ್ಯಾವಾಟಿಕೆಗೆ ದೂಡಿದ್ದಲ್ಲದೇ ನಿರಂತರವಾಗಿ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆಸಿರೋ ಘಟನೆ ಬೆಳಕಿಗೆ ಬಂದಿದೆ.
ವೇಶ್ಯಾವಾಟಿಕೆ ಅಡ್ಡದ ಮೇಲೆ ದಾಳಿ ಮಾಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ವೇಳೆ ಗ್ಯಾಂಗ್ ರೇಪ್ ಮಾಡಲಾಗಿದೆ ಎಂದು ಯುವತಿ ಹೇಳಿಕೆ ನೀಡಿದ್ದಾಳೆ. ಯುವತಿಯನ್ನ ರೌಡಿ ಶೀಟರ್ ಜೊತೆಗೆ ಬಲವಂತವಾಗಿ ಕಳುಹಿಸಿರೋದಾಗಿ ಯುವತಿ ಹೇಳಿಕೆ ನೀಡಿದ್ದಾಳೆ.
ಇನ್ನೂ ಯುವತಿ ಪ್ರಿಯಕರನೇ ಆಕೆಯನ್ನ ಬೆಂಗಳೂರಿಗೆ ಕರೆತಂದು ವೇಶ್ಯಾವಾಟಿಕೆ ನಡೆಸ್ತಿದ್ದ ಮಂಜುಳ ಸಂಪರ್ಕಕ್ಕೆ ಬಿಟ್ಟಿದ್ದ. ಕಳೆದ ಮೂರು ವರ್ಷಗಳ ಹಿಂದೆ ಮಂಡ್ಯ ಮೂಲದ ಯುವತಿಯನ್ನು ಬೆಂಗಳೂರಿಗೆ ಕರೆತರಲಾಗಿತ್ತು.
ಪಿಂಪ್ ಬ್ರಹ್ಮೇಂದ್ರ ಮೂಲಕ ಶಿವಾನಂದ ಸರ್ಕಲ್ ನ ಸಾಯಿ ಲಾಡ್ಜ್ ನಲ್ಲಿ ದಂಧೆ ನಡೆಸಲಾಗ್ತಿತ್ತು. ಮೊದಲಿಗೆ ಯುವತಿ ಆಕ್ಷೇಪ ವ್ಯಕ್ತಪಡಿಸಿದ್ರು. ನಂತರ ಬಡತನ ಇದ್ದಿದ್ರಿಂದ ಅನುಸರಿಸಿಕೊಂಡು ಹೋಗಿದ್ಳು. ಆದ್ರೆ ಕಾಲ ಕ್ರಮೇಣ ಯುವತಿಗೆ ಟಾರ್ಚರ್ ನೀಡಿ ಒಂದೇ ದಿನಕ್ಕೆ ಹತ್ತು ಜನರ ಜೊತೆಗೆ ಯುವತಿ ಹೋಗುವಂತೆ ಟಾರ್ಚರ್ ನೀಡಿದ್ದಾರೆ. ಕೆಲವೊಮ್ಮೆ ಬಲವಂತ ಪಡಿಸಿ ಸಿಗರೇಟ್ ನಿಂದ ಸುಟ್ಟು ಹಿಂಸಿಸಿರೋದಾಗಿ ಹೇಳಿಕೆ ನೀಡಿದ್ದಾಳೆ.
ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ಸಂಬಂಧ ಪಿಂಪ್ ಬ್ರಹ್ಮೇಂದ್ರ, ಮಂಜುಳ, ಲಾಡ್ಜ್ ಮಾಲೀಕ ಸಂತೋಷ್ ಸೇರಿ ಮೂವರ ಬಂಧನವಾಗಿದೆ.
PublicNext
20/08/2022 02:29 pm