ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ನಾಳೆ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ

ಬೆಂಗಳೂರು: ಸಿಲಿಕಾನ್ ಸಿಟಿಯನ್ನೆ ಬೆಚ್ಚಿಬೀಳಿಸಿದ್ದ ಆ್ಯಸಿಡ್ ದಾಳಿ ಪ್ರಕರಣದ ಚಾರ್ಜ್ ಶೀಟನ್ನು ನಾಳೆ ನ್ಯಾಯಾಲಯಕ್ಕೆ ಕಾಮಾಕ್ಷಿಪಾಳ್ಯ ಪೊಲೀಸ್ರು ಸಲ್ಲಿಸಿದ್ದಾರೆ. ಮೂರು ತಿಂಗಳ ಸುದೀರ್ಘ ತನಿಖೆಯ ಬಳಿಕ ಪೊಲೀಸರು 13 ನೇ ಎಸಿಎಂಎಂ ಕೋರ್ಟ್ ಗೆ ಸಲ್ಲಿಕೆ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ.

ಇನ್ನು 770 ಪುಟಗಳ ಪ್ರಾಥಮಿಕ ಚಾರ್ಜ್ ಶೀಟ್ ಇದಾಗಿದ್ದು,92 ಸಾಕ್ಷಿಗಳನ್ನ ಉಲ್ಲೇಖಿಸಲಾಗಿದೆ. ಹಾಗೆಯೇ ಇಬ್ಬರು ಐ ವಿಟ್ನೆಸ್ ಗಳ 164 ಸ್ಟೇಟ್ಮೆಂಟ್ ಗಳನ್ನೂ ದಾಖಲಿಸಿಕೊಳ್ಳಲಾಗಿದೆ.

ನಾಗೇಶ್ ಯುವತಿ ಮೇಲೆ ಆ್ಯಸಿಡ್ ಎರಚಿದ ಮೇಲೆ ತನ್ನ ಸಹೋದರನಿಗೆ ಕರೆ ಮಾಡಿದ್ದ ಆಡಿಯೋ ಸೇರಿ, ಹಲವು ವಾಯ್ಸ್ ರೆಕಾರ್ಡ್‌ಗಳನ್ನ ಎಫ್.ಎಸ್.ಎಲ್‌ಗೆ ರವಾನೆ ಮಾಡಲಾಗಿತ್ತು.ಈಗ ಅದು ನಾಗೇಶನ ಧ್ವನಿ ಎಂದು ಕನ್ಫರ್ಮ್ ಆಗಿದೆ. ಇನ್ನು ಈ ಹಿಂದೆ ನಾಗೇಶ್ ಹಾಗೂ ಸಂತ್ರಸ್ತೆಯ ಕನ್ಫೇಷನ್ ಕಾಪಿಯಲ್ಲಿ ನೀಡಿರೋ ಹೇಳಿಕೆಯ ಅಂಶಗಳು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿವೆ.ಇದೇ ವೇಳೆ ಸಾಕಷ್ಟು ಸಿಸಿಟಿವಿಗಳನ್ನೂ ಕೂಡ ಸೀಜ್ ಮಾಡಲಾಗಿದ್ದು, ಆ ಸಾಕ್ಷಿಗಳನ್ನ ಕೋರ್ಟ್ ಗೆ ಸಲ್ಲಿಸಲಾಗುತ್ತದೆ.

Edited By : Somashekar
PublicNext

PublicNext

09/08/2022 04:18 pm

Cinque Terre

23.73 K

Cinque Terre

0

ಸಂಬಂಧಿತ ಸುದ್ದಿ