ಬೆಂಗಳೂರು : ಇತ್ತೀಚೆಗೆ ಬೆಂಗಳೂರು ಮಹಾನಗರದಲ್ಲಿ ಆಫ್ರಿಕನ್ ಪ್ರಜೆಗಳ ಅಟ್ಟಹಾಸ & ಅಕ್ರಮ ಚಟುವಟಿಕೆ ದಿನೇ ದಿನೇ ಹೆಚ್ಚಾಗ್ತಲೇ ಇದೆ. ಇದಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ದಾಖಲೆ ಇಲ್ಲದೆ ಅಕ್ರಮ ವಾಸ & ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದವರಿಗೆ ಈಶಾನ್ಯ ವಿಭಾಗದ ಪೊಲೀಸರು ಬ್ರೇಕ್ ಹಾಕ್ತಿದ್ದಾರೆ.
ಕಳೆದ ಮೂರು ತಿಂಗಳ ಅವದಿಯಲ್ಲಿ 28ಜನರನ್ನ ಜ್ಯುಡಿಷಿಯಲ್ ಕಸ್ಟಡಿಗೆ ಒಪ್ಪಿಸಿದ್ದರೆ, 38 ಜನರನ್ನ ನಿರಾಶ್ರಿತರ ಕೇಂದ್ರಗಳಿಗೆ ಕಳುಹಿಸಲಾಗಿದೆ. ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಲಿ-16 ಜನ, ಬಾಗಲೂರು-6, ಸಂಪಿಗೇಹಳ್ಳಿ-5, ಕೊತ್ತನೂರು, ಅಮೃತಹಳ್ಳಿ, ಕೊಡಿಗೇಹಳ್ಳಿ, ವಿದ್ಯಾರಣ್ಯಪುರ & ಯಲಹಂಕ ಉಪನಗರ ಪೊಲೀಸ್ ಠಾಣೆ ಸೇರಿದಂತೆ ಈಶಾನ್ಯ ವಿಭಾಗದ 11ಠಾಣೆಗಳಿಂದ ಒಟ್ಟು 64ಜನ ಪೊಲೀಸರ ವಶವಾಗಿದ್ದಾರೆ.
ಈ ಬಗ್ಗೆ ನಮ್ಮ ಪ್ರತಿನಿಧಿ ಸುರೇಶ್ ಬಾಬು ನೀಡಿರುವ EXCLUSIVE ರಿಪೋರ್ಟ್ ಇಲ್ಲಿದೆ ನೋಡಿ.
PublicNext
29/07/2022 03:49 pm