ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಬಾಲಕ‌ ಬಲಿ

ಬೆಂಗಳೂರು: ಬೈಕ್ ಸ್ಕಿಡ್ ಆಗಿ ಬಿದ್ದ ಬಾಲಕನ ಮೇಲೆ ಟ್ರಕ್ ಹರಿದಿದೆ. ಪರಿಣಾಮ ಸ್ಥಳದಲ್ಲೇ ‌ಬಾಲಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆ.ಆರ್ ಪುರಂನ‌ ಸಾಯಿ ಗೋಲ್ಡ್ ಪ್ಯಾಲೇಸ್ ಮುಂಭಾಗ ನಡೆದಿದೆ. ರಸ್ತೆಯಲ್ಲಿ ಬಿರುಕು ಮೂಡಿದ್ದು ಅದರ ಮೇಲೆ ಬಿಬಿಎಂಪಿ ಜಲ್ಲಿಕಲ್ಲುಗಳನ್ನು ಹಾಕಿದೆ. ಇದೇ ಕಾರಣಕ್ಕೆ ಅಪಘಾತ ನಡೆದಿದೆ ಎನ್ನಲಾಗಿದೆ. ಕೂದಲೆಳೆ ಅಂತರದಲ್ಲಿ ‌ಬೈಕ್ ಚಲಾಯಿಸುತ್ತಿದ್ದ ಮೃತ ಬಾಲಕನ ತಂದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ಬೇಗೂರು ಠಾಣೆಯಲ್ಲಿ ಕಾನ್ಟ್ಟೇಬಲ್ ಆಗಿದ್ದ ಸಂತೋಷ್ ಕಳೆದ ೧೫ ದಿನಗಳ ಹಿಂದೆ ‌ಕೆ.ಆರ್ ಪುರಂ ನಿಂದ ವರ್ಗಾವಣೆ ಆಗಿದ್ದರು. ಬಾಲಕನ ಎದೆ ಮೇಲೆ ಮಿಲಟರಿ ಟ್ರಕ್ ವಾಹನ ಹತ್ತಿದೆ. ಘಟನೆ ನಡೆದ ಕೂಡಲೇ ಚಾಲಕ ಪರಾರಿಯಾಗಿದ್ದಾನೆ.

Edited By :
PublicNext

PublicNext

12/08/2022 11:31 am

Cinque Terre

32.69 K

Cinque Terre

2

ಸಂಬಂಧಿತ ಸುದ್ದಿ