ಬೆಂಗಳೂರು: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಡ್ರಗ್ಸ್ ಸಪ್ಲೈ ಹೆಚ್ಚಾಗ್ತಿದೆ. ಈ ಮಧ್ಯೆ ಕಾರಲ್ಲಿ ವೈಜಾಗ್ ಗೆ ಟ್ರಿಪ್ ಹೋಗ್ತಿದ್ದವ್ರು ಪೊಲೀಸ್ರಿಗೆ ಸಿಕ್ಕಿ ಬಿದ್ದಿದ್ದಾರೆ. ಕಾರಿನ ಡಿಕ್ಕಿ ಓಪನ್ ಮಾಡಿದಾಗ ಗಾಂಜಾ ಸಿಕ್ಕಿತ್ತು! ಮೂಟೆ ಕಟ್ಕೊಂಡ್ ಬಂದು ಕಾಲೇಜು ಬಳಿ ಗಾಂಜಾ ಮಾರುತ್ತಿದ್ದ ಯುವಕ ಅಂದರ್ ಆಗಿದ್ದಾನೆ.
ಹೀಗೆ ಸಾಲಾಗಿ ಜೋಡಿಸಿರೋ ಚಿಕ್ಕಚಿಕ್ಕ ಮೂಟೆ. ಪರಿಶೀಲನೆ ಮಾಡ್ತಿರೋ ಪೊಲೀಸ್ ಅಧಿಕಾರಿಗಳು. ಅಷ್ಟಕ್ಕೂ ಈ ಮೂಟೆಗಳಲ್ಲಿರೋದು ಗಾಂಜಾ. ಹೌದು... ಬೇಗೂರು ಮತ್ತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ರು ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ಮಾರುತ್ತಿದ್ದವರನ್ನು ಬಂಧಿಸಿ, ಒಟ್ಟು 40 ಲಕ್ಷ ಮೌಲ್ಯದ ಗಾಂಜಾ ಸೀಝ್ ಮಾಡಿದ್ದಾರೆ.
ಇತ್ತೀಚೆಗೆ ನಗರದ ಹೊರವಲಯದಲ್ಲಿ ಕಾರಲ್ಲಿ ಗಾಂಜಾ ಸಪ್ಲೈ ಮಾಡ್ತಿರೋ ಬಗ್ಗೆ ಬೇಗೂರು ಪೊಲೀಸ್ರಿಗೆ ಮಾಹಿತಿ ಸಿಕ್ಕಿತ್ತು. ಆಂಧ್ರದ ವೈಜಾಗ್ ನಿಂದ ಬಂದಿದ್ದ ಕಾರನ್ನು ಪರಿಶೀಲಿಸಿದ್ದು, ಯಾವುದೇ ವಸ್ತು ಪತ್ತೆಯಾಗಿರಲಿಲ್ಲ. ಬಳಿಕ ಆರೋಪಿಗಳು ಭಯದಿಂದ ಉತ್ತರಿಸ್ತಿದ್ದನ್ನು ಗಮನಿಸಿ ಡಿಕ್ಕಿ, ಬ್ಯಾನೆಟ್ ತೆಗೆದಾಗ 32 ಲಕ್ಷ ಮೌಲ್ಯದ 56 ಕೆಜಿ ಗಾಂಜಾ ಪತ್ತೆಯಾಗಿದೆ.
ಬಳಿಕ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ನಗರದಲ್ಲಿ ಸಪ್ಲೈ ಮಾಡ್ತಿದ್ದ ಒಟ್ಟಾರೆ 8 ಮಂದಿಯನ್ನು ಬಂಧಿಸಲಾಗಿದೆ. ನರೇಶ್ ಬೆಹರಾ, ಅಕ್ಷಯ್ ಬಿಂದಾನಿ, ತಪನ್‌ಕುಮಾರ್ ಪರಿಡಾ, ಶೇಖ್ ಮಸ್ತಾನ್, ಖಾಸಿಂ ಷರೀಫ್, ಕಂದಾ, ನಂದೀಶ , ಮಹಮ್ಮದ್ ಯಾಸಿನ್ ಬಂಧಿತರು.
ಹುಳಿಮಾವು ಠಾಣೆ ಪೊಲೀಸ್ರು ಸಹ ವೈಜಾಗ್ ಮೂಲದ ರಾಜರತ್ನಂ ಎಂಬಾತನನ್ನು ಬಂಧಿಸಿದ್ದಾರೆ. ಬಸ್ ನಲ್ಲಿ ಗಾಂಜಾ ಮೂಟೆ ತಂದು, ಪ್ರತಿಷ್ಠಿತ ಕಾಲೇಜುಗಳ ಬಳಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡ್ತಿದ್ದ. ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ರೂಮ್ ಮಾಡಿದ್ದು, ರೂಮ್ ಶೋಧಿಸಿದಾಗ 25 ಕೆಜಿ ಗಾಂಜಾ ಪತ್ತೆಯಾಗಿದೆ.
ಆರೋಪಿ ರಾಜರತ್ನಂ, ಡ್ರಗ್ಸ್ ಮಾರಾಟ ಹಣದಿಂದ ಪಬ್ ಗಳಲ್ಲಿ ಮೋಜು ಮಸ್ತಿ ಮಾಡ್ತಿದ್ದ. ಸಬ್ ಪೆಡ್ಲರ್ಸ್ ನಿಂದಲೂ ಮಾರಾಟ ಮಾಡ್ತಿದ್ದ. ಆಂಧ್ರದಲ್ಲಿರೋ ತನ್ನ ಬಾಸ್ ಗೆ ಕಮಿಷನ್ ಕೊಡ್ತಿದ್ದು, ಆತನಿಗಾಗಿ ಹುಡುಕಾಟ ನಡೆದಿದೆ.
PublicNext
12/07/2022 08:16 pm