ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಾಲಿಕೆಗೆ GST ತೆರಿಗೆ ವಂಚನೆ : ಮಾಹಿತಿ ಅಧ್ಯಯನ ಕೇಂದ್ರ ಆಗ್ರಹ

ಬೆಂಗಳೂರು: ಬಿಬಿಎಂಪಿ ವತಿಯಿಂದ ಅಸಮರ್ಪಕ GST ಕಾನೂನಿನ ಅನುಷ್ಠಾನದಿಂದ ಪಾಲಿಕೆಗೆ ಮತ್ತು ರಾಜ್ಯ ಸರ್ಕಾರಕ್ಕೆ ಸುಮಾರು ಒಂದು ಸಾವಿರ ಕೋಟಿ ನಷ್ಟವಾಗಿದೆ. ಈ ನಷ್ಟವನ್ನು ತಡೆಗಟ್ಟಲು ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆ ಮ್ಯಾನೇಜಿಂಗ್ ಟ್ರಸ್ಟಿ ಬಿ. ಹೆಚ್. ವೀರೇಶ್ ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ಮಾಧ್ಯಮದೊಂದಿಗೆ ಬುಧವಾರ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಮಾತನಾಡುತ್ತಾ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ ಬೃಹತ್ ನಷ್ಟ ಉಂಟು ಮಾಡಿದ್ದಾರೆ ಎಂದರು.

ಮುಖ್ಯ ಲೆಕ್ಕ ಪರಿಶೋಧನೆ ಇಲಾಖೆ ಪ್ರಕಾರ ಜುಲೈ 1, 2017ರ ನಂತರ ಅನ್ವಯವಾಗುವಂತೆ ನಿರ್ವಹಿಸುವ ಕಾಮಗಾರಿಗಳಿಗೆ/ಸರಬರಾಜುಗಳಿಗೆ ಗುತ್ತಿಗೆದಾರರಿಂದ ಕಾಯಿದೆಯಲ್ಲಿ ನಿಗದಿಪಡಿಸಿರುವ ಮಾನದಂಡದಂತೆ ಬಿಲ್ ನೀಡಲು ಸಂಬಂಧಪಟ್ಟ ಗುತ್ತಿಗೆದಾರರಿಗೆ/ಸರಬರಾಜುದಾರರಿಗೆ ಸೂಚಿಸುವುದು. ಎಲ್ಲ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹಾಲಿ ಚಾಲ್ತಿಯಲ್ಲಿರುವ ಸಿ.ಸಿ ಬಿಲ್ ಜೊತೆಯಲ್ಲಿ ಕಾಯಿದೆಯಲ್ಲಿ ನಿಗದಿ ಪಡಿಸಿರುವ ಕ್ರಮಾಂಕಿತ ಗುತ್ತಿಗೆದಾರರ ಬಿಲ್‌ಅನ್ನು ಗುತ್ತಿಗೆದಾರರಿಂದ ಪಡೆಯುವುದು. ಸದರಿ Invoice (ಬಿಲ್)ನಲ್ಲಿ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಯ ವೆಚ್ಚದ ಮೊತ್ತ CGST ಮತ್ತು SGST ಪ್ರತ್ಯೇಕವಾಗಿ ವಿಂಗಡಿಸಿ 2 (work done cost + CGST + SGST = Bill Amount). ಕಾಮಗಾರಿಗಳಿಗೆ ಮುಂಗಡ ಹಣ ಪಾವತಿಸುವ ಸಂದರ್ಭದಲ್ಲೂ ಸಹ ಮೇಲಿನಂತೆ ಕ್ರಮವಹಿಸುವುದು", ಎಂದು ತಿಳಿಸಿದೆ.

ವಿಪರ್ಯಾಸ ವೆಂದರೆ, ಪಾಲಿಕೆಯಲ್ಲಿ ಬಿಲ್‌ ಪಾವತಿಸುವಾಗ ಯಾವ ಬಿಲ್ ಗಳಲ್ಲೂ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಯ ವೆಚ್ಚದ ಮೊತ್ತ, CGST ಮತ್ತು SGST ಪ್ರತ್ಯೇಕವಾಗಿ ವಿಂಗಡಿಸಿ ನೀಡುತ್ತಿಲ್ಲ. GST Invoice ಗಳನ್ನು ಸಹ ಸಲ್ಲಿಸುತ್ತಿಲ್ಲ ಇವುಗಳನ್ನು Integrated Finance Management ನಲ್ಲೂ ಅಪ್ ಲೋಡ್ ಮಾಡುತ್ತಿಲ್ಲ. ಇದರಿಂದ ಪಾಲಿಕೆಯು ಅನಾವಶ್ಯಕವಾಗಿ ಹೆಚ್ಚಿನ ತೆರಿಗೆ ನೀಡಬೇಕಾದ ಸಂಧರ್ಭ ಒದಗಿದೆ. ಇದರಿಂದ ಸದರಿ ಕಾಮಗಾರಿಗೆ ಉಪಯೋಗಿಸಿದ ಕಬ್ಬಿಣ, ಸಿಮೆಂಟ್, ಕಾಂಕ್ರೀಟ್, ಮರಳು, ಜಲ್ಲಿ, ಬಿಟುಮಿನ್ ಮುಂತಾದ ವಿವರಗಳು ಮತ್ತು ಅವುಗಳಿಗೆ ಸಂದಾಯವಾದ ಜಿ.ಎಸ್‌.ಟಿ. ತೆರಿಗೆಯ ವಿವರ ಲಭ್ಯವಾಗುವುದಿಲ್ಲ. GST Invoice ಗಳನ್ನು ಸಲ್ಲಿಸುವುದರಿಂದ ಸದರಿ ಕಾಮಗಾರಿಗೆ ಉಪಯೋಗಿಸಿದ ವಸ್ತುಗಳ ವಿವರದ ಸಹಾಯದಿಂದ ಕಾಮಗಾರಿಯ ಗುಣಮಟ್ಟವನ್ನು ಅಳೆಯಬಹುದಾಗಿರುತ್ತದೆ. ಇದು ಕಾಮಗಾರಿ ನಡೆಸದೆ ಭೋಗಸ್‌ ಬಿಲ್‌ಗಳನ್ನು ನೀಡಿ ಹಣ ಲಪಟಾಯಿಸುತ್ತಿರುವವರಿಗೆ ಕಡಿವಾಣ ಹಾಕಿದಂತಾಗುತ್ತದೆ, ಎಂದರು.

GST Invoice ಗಳನ್ನು ಸಲ್ಲಿಸದಿರುವ ಮತ್ತು ಇವುಗಳನ್ನು Integrated Finance Management ನಲ್ಲಿ ಅಪ್ ಲೋಡ್ ಮಾಡದ ಸಂಧರ್ಭದಲ್ಲಿ ಯಾವುದೇ ಕಾರಣಕ್ಕೂ ಅಂಥಹ ಬಿಲ್ ಗಳನ್ನು ಪಾವತಿ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಆದೇಶಿಸಬೇಕೆಂದು, ಆಗ್ರಹಿಸಿದರು.

ಇದಲ್ಲದೆ ಜುಲೈ 1, 2022 ರ ನಂತರ ಸಲ್ಲಿಸಲಾಗುವ ಕಾಮಗಾರಿಗಳಿಗೆ ಸಂಬಂಧಿಸಿದ ಎಲ್ಲ ಬಿಲ್ ಗಳ ಮೇಲೆ ಶೇಕಡಾ 12ರ ಬದಲಾಗಿ ಶೇಕಡಾ 18ರಷ್ಟು ಜಿ.ಎಸ್‌.ಟಿ. ಪಾವತಿಸಬೇಕಾಗಿರುತ್ತದೆ. ಆದರೆ ಈ ಬಗ್ಗೆ ಯಾವುದೇ ಒಪ್ಪಂದವನ್ನು ಗುತ್ತಿಗೆದಾರರ ಜೊತೆ ಮಾಡಿಕೊಳ್ಳುವುದರಲ್ಲಿ ಪಾಲಿಕೆಯು ವಿಫಲವಾಗಿರುವುದರಿಂದ ಹೆಚ್ಚುವರಿ ಹೊರೆಯನ್ನು ಪಾಲಿಕೆಯೇ ಹೊರಬೇಕಾಗಿದೆ. ಇದರಿಂದ ಪಾಲಿಕೆಗೆ ಅನಾವಶ್ಯಕ ಆರ್ಥಿಕ ಹೊರೆ ಉಂಟಾಗಲಿದೆ.

Edited By : Somashekar
PublicNext

PublicNext

06/07/2022 08:09 pm

Cinque Terre

47.23 K

Cinque Terre

2

ಸಂಬಂಧಿತ ಸುದ್ದಿ