ಬೆಂಗಳೂರು: ಕೆಲ ದಿನಗಳ ಹಿಂದಷ್ಟೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸಿಬಿ ದಾಳಿ ನಡೆಸಿತ್ತು. ಈ ವೇಳೆ ಜಮೀನು ಅರ್ಜಿ ವಿಲೇವಾರಿ ವಿಚಾರವಾಗಿ ಜಿಲ್ಲಾಧಿಕಾರಿ ಹೆಸರಲ್ಲಿ ತಹಶೀಲ್ದಾರ್ ಲಂಚ ಪಡೆಯವಾಗ ಎಸಿಬಿ ಬಲೆಗೆ ಬಿದ್ದಿದ್ರು. ಈ ವಿಚಾರವಾಗಿ ಜಿಲ್ಲಾಧಿಕಾರಿ ಮಂಜುನಾಥ್‌ಗೆ ವಿಚಾರಣೆ ಹಾಜರಾಗುವಂತೆ ಎಸಿಬಿ ನೋಟೀಸ್ ನೀಡಿತ್ತು. ನೊಟೀಸ್ ಗೆ ಕಳೆದ ಎರಡು ದಿನಗಳ ಹಿಂದೆ ಹಾಜರಾಗಿದ್ದ ಡಿಸಿ ಮಂಜುನಾಥ್ ವಿಚಾರಣೆ ನಡೆಸಿ ಎಸಿಬಿ ಹಿರಿಯ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ವಿಚಾರಣೆಗೆ ಅಗತ್ಯವಾದರೆ ಮತ್ತೆ ಹಾಜರಾಗುವಂತೆ ಡಿ.ಸಿ ಅವರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ವಿಚಾರಣೆ ವೇಳೆ ಲಂಚದ ಹಣಕ್ಕೂ ತಮಗೂ ಸಂಬಂಧ ಇಲ್ಲ. ತಮ್ಮ ಗಮನಕ್ಕೆ ಬಾರದೇ ಲಂಚ ಪಡೆದರುವ ಶಂಕೆ ಇದೆ ಎಂದು ಡಿ.ಸಿ ಮಂಜುನಾಥ್ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
PublicNext
24/06/2022 07:36 pm