ಬೆಂಗಳೂರು: ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹರದ ಅಕ್ರಮ ತಿಂಗಳುಗಳ ಹಿಂದೆ ಮಾದ್ಯಮಗಳಲ್ಲಿ ಜಗಜಾಹಿರಾಗಿತ್ತು. ಇಲ್ಲಿ ಕಾಸು ಕೋಟ್ರೆ ಏನ್ ಬೇಕಾದ್ರು ಸಿಗುತ್ತೆ ಅನ್ನೋದಕ್ಕೆ ರೌಡಿಗಳೇ ಸಿಬ್ಬಂದಿ ಹಣ ಕೊಟ್ಟು ಸವಲತ್ತು ಪಡೆಯೋದನ್ನ ವಿಡಿಯೋ ಮಾಡಿದ್ರು. ವಿಡಿಯೋಗಳು ಮಾದ್ಯಮದಲ್ಲಿ ಬಿತ್ತರ ಆಗ್ತಿದ್ದಂತೆ ಎಚ್ಚೆತ್ತ ಸರ್ಕಾರ ಜೈಲು ಅಕ್ರಮದ ತನಿಖಾ ಜವಾಬ್ದಾರಿಯನ್ನ ಹಿರಿಯ ಐಪಿಎಸ್ ಅಧಿಕಾರಿ ಎಸ್ ಮುರುಗನ್ ಹೆಗಲಿಗೆ ವಹಿಸಿತ್ತು.
ಸದ್ಯ ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿರೋ ಎಡಿಜಿಪಿ ಮುತುಗನ್ ಜೈಲು ಡಿಜಿ ಅಲೋಕ್ ಮೋಹನ್ ಗೆ ವರದಿ ಸಲ್ಲಿಸಿದ್ದಾರೆ.
ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ ನಲ್ಲಿ ನಡೆದ ಅಕ್ರಮಗಳು ಸತ್ಯ. ಕೈದಿಗಳಿಗೆ ಗಾಂಜಾ ಎಗ್ಗಿಲ್ಲದೆ ಸಿಕ್ತಿದೆ. ಮೊಬೈಲ್ ಫೋನ್ ಗಳು ಕೂಡ ಆರಾಮಾಗೆ ಜೈಲೊಳಗೆ ಸಿಕ್ತಿವೆ.ಭ್ರಷ್ಟಾಚಾರ ಎಗ್ಗಿಲ್ಲದೆ ನಡೀತಿದೆ ಎಂದು ತನಿಖಾಧಿಕಾರಿ ಎಡಿಜಿಪಿ ಮುರುಗನ್ ಸೇರಿದಂತೆ ಐವರು ಅಧಿಕಾರಿಗಳು ಎರಡು ತಿಂಗಳ ಕಾಲ ತನಿಖೆ ನಡೆಸಿ ವರದಿ ನೀಡಿದ್ದಾರೆ.ಜೈಲಿನ ಚೀಪ್ ಸೂಪರ್ಡೆಂಟ್ ಮತ್ತು ಸೂಪರ್ ಡೆಂಟ್ ಸೇರಿ ಎಲ್ಲಾ ಭದ್ರತಾ ಸಿಬ್ಬಂದಿ ವಿಚಾರಣೆ ನಡೆಸಿ ಅಕ್ರಮಗಳು ನಡೆಯುತ್ತಿವರ ಅಂತಾ ರಿಪೋರ್ಟ್ ನೀಡಿದ್ದಾರೆ.
ರೌಡಿಶೀಟರ್ ಜೆಸಿಬಿ ನಾರಾಯಣನ ವಿಡಿಯೋ ಹಾಗೂ ರೌಡಿಶೀಟರ್ ಗಳ ಕರೆ ಬಗ್ಗೆ ತನಿಖೆ ನಡೆಸಿದ್ದ ತನಿಖಾಧಿಕಾರಿ, ಜೈಲಿನಲ್ಲಿ ಅಕ್ರಮಗಳು ನಡೆದಿರೋದು ಸತ್ಯ. ಮಾದಕ ವಸ್ತು ಸಪ್ಲೈ ಆಗ್ತಿದೆ, ಮೊಬೈಲ್ ಗಳು ಜೈಲಿನ ಒಳಗೆ ಬಳಕೆ ಆಗ್ತಿವೆ. ಭದ್ರತಾ ವೈಫಲ್ಯವಿದೆ ಅಂತಾ ವರದಿ ನೀಡಿದೆ.ಅಕ್ರಮದ ವರದಿ ಜೊತೆಗೆ ರಿಪೋರ್ಟ್ ನಲ್ಲಿ ಜೈಲಿನಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆಯೂ ಸಲಹೆ ನೀಡಲಾಗಿದೆ.
PublicNext
20/06/2022 11:15 pm