ಬೆಂಗಳೂರು: ಬೆಳ್ತಂಗಡಿಯಲ್ಲಿ ರಾಮಮೂರ್ತಿನಗರ ಪೊಲೀಸರು 750kg ರಕ್ತ ಚಂದನ ಜಪ್ತಿ ಮಾಡಿ ದುರ್ಬಳಕೆ ಮಾಡಿಕೊಂಡಿದ್ದಾರೆ ಅನ್ನೋ ಆರೋಪ ಕೇಳಿಬಂದಿತ್ತು. ಈ ಆರೋಪ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ. ಈ ಬಗ್ಗೆ ಖುದ್ದು ಪೂರ್ವ ವಲಯ ಹೆಚ್ಚುವರಿ ಆಯುಕ್ತರು ಮಾಹಿತಿ ನೀಡಿದ್ದಾರೆ.
ರಾಮಮೂರ್ತಿ ನಗರ ಪೊಲೀಸರು ಅಕ್ಟೋಬರ್ ತಿಂಗಳಲ್ಲಿ ಗಾಂಜಾ ಪ್ರಕರಣದ ಆರೋಪಿಗಳ ಪತ್ತೆಗೆ ಬೆಳ್ತಂಗಡಿಗೆ ತೆರಳಿದ್ರು. ಈ ವೇಳೆ ಒಂದ್ ಬ್ಯಾಗ್ ಪತ್ತೆಯಾಗಿದ್ದು, ಆರೋಪಿಗಳು ಪರಾರಿಯಾಗಿದ್ರು.. ಬ್ಯಾಗ್ ನಲ್ಲಿ 16 ರಕ್ತಚಂದನ ಪತ್ತೆಯಾಗಿದ್ದು, ಗಾಂಜಾ ಕೂಡಾ ಕಡಿಮೆ ಪ್ರಮಾಣದಲ್ಲಿ ಪತ್ತೆಯಾಗಿತ್ತು. ರಕ್ತ ಚಂದನದ ತುಂಡುಗಳನ್ನ ಪೊಲೀಸರು ಸ್ಟೇಷನ್ ಗೆ ತಂದು ಡೈರಿಯಲ್ಲಿ ಎಂಟ್ರಿ ಮಾಡಿದ್ದಾರೆ. ಆದ್ರೆ ಆರೋಪಿಗಳು ಸಿಗೋವರೆಗೂ ಎಫ್ ಐ ಆರ್ ಮಾಡೋದು ಬೇಡ ಅಂತ ಹೋಲ್ಡ್ ಮಾಡಿದ್ರು. ನಂತರ ರಕ್ತ ಚಂದನವನ್ನ ಪೊಲೀಸರೇ ದುರ್ಬಳಕೆ ಮಾಡಿಕೊಂಡಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಇದೀಗ ಪೂರ್ವ ವಲಯ ಡಿಸಿಪಿ ತನಿಖೆ ಮೇಲ್ವಿಚಾರಣೆ ಮಾಡ್ತಿದ್ದಾರೆ ಎಂದು ಎ ಎಸ್ ರಾವ್ ಮಾಹಿತಿ ನೀಡಿದ್ರು.
Kshetra Samachara
21/03/2022 03:21 pm