ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಕೋಟೆ: ಅರಣ್ಯ ಇಲಾಖೆ ಕೋಟ್ಯಾಂತರ ಬೆಲೆ 500 ಕ್ಕೂ ಹೆಚ್ಚು ಶ್ರೀಗಂಧದ ಮರ ನಾಪತ್ತೆ !

ಇದು ರಾಜ್ಯ & ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಅರಣ್ಯ ಇಲಾಖೆಯ ವನ ವಿಜ್ಞಾನ ಕೇಂದ್ರ. 25 ಎಕರೆ ಜಾಗದಲ್ಲಿ ಅರಣ್ಯೀಕರಣದ ಭಾಗವಾಗಿ ವಿವಿಧ ಮರ, ಸಾವಿರಾರಿ ಶ್ರೀಗಂಧದ ಮರನ ಸಂಶೋಧನೆಗಾಗಿ ಬೆಳೆಸಲಾಗ್ತಿದೆ. ಇದೇ ಶ್ರೀಗಂಧ ಮರಗಳ ಮೆಲೆ ಖದೀಮರ ಕಣ್ಣು ಬಿದ್ದು ರಾತ್ರೋರಾತ್ರಿ ನೂರಾರು ಶ್ರೀಗಂಧ ಮರ ನಾಪತ್ತೆಯಾಗಿವೆ.

ವಿಶಾಲವಾಗಿರೋ ಅರಣ್ಯ ಪ್ರದೇಶದ ವನ ವಿಜ್ಞಾನ ಕೇಂದ್ರ. ಇಲ್ಲಿನ ಅರಣ್ಯ ಪ್ರದೇಶದಲ್ಲಿ ತಲೆ ಎತ್ತಿ ನಿಂತಿರೋ ಸಾವಿರಾರು ಶ್ರೀಗಂಧ ಮರ. ಇದೇ ಶ್ರೀಗಂಧ ಮರಗಳನ್ನ ಎಲ್ಲಂದರಲ್ಲೆ ಕಡಿದು ಎಸ್ಕೆಪ್ ಮಾಡಿರೋ ಖದೀಮರು.ಹೌದು ಈ ಎಲ್ಲಾ ಶ್ರೀಗಂಧ ಮರಗಳ ಕಳ್ಳತನವಾಗಿರೋದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಗೊಟ್ಟಿಪುರ ಅರಣ್ಯ ಪ್ರದೇಶದಲ್ಲಿ.

ಕೋಟ್ಯಾಂತರ ಬೆಲೆಯ ಶ್ರೀಗಂಧ ಮರಗಳಿಗೆ ವನ ವಿಜ್ಞಾನ ಕೇಂದ್ರದಲ್ಲಿ ರಕ್ಷಣೆ ಇಲ್ಲ. ಅಧಿಕಾರಿಗಳು, ಗಾರ್ಡ್‌ಗಳಿದ್ದರು ನೂರಾರು ಶ್ರೀಗಂಧ ಮರ ಕಳ್ಳರ ಪಾಲಾಗಿರುವುದು ಅನೇಕ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ದೂರು ಪಡೆದಿರೊ ಹೊಸಕೋಟೆ ಪೊಲೀಸರು ಶ್ರೀಗಂಧದ ಮರಗಳ್ಳರ ಪತ್ತೆ ಹಚ್ಚಿ, ಕಾನೂನು ಕ್ರಮ ಜರುಗಿಸಬೇಕಿದೆ.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ..

Edited By :
PublicNext

PublicNext

26/07/2022 12:47 pm

Cinque Terre

28.91 K

Cinque Terre

3

ಸಂಬಂಧಿತ ಸುದ್ದಿ