ಬೆಂಗಳೂರು: ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಈ-ಮೇಲ್ ಪ್ರಕರಣ ಸಂಬಂಧ ನಟ ಹುಚ್ಚ ವೆಂಕಟ್ ಪ್ರತಿಕ್ರಿಯೆ ನೀಡಿದ್ದು, ನನ್ನ ಹೆಸರನ್ನು ಯಾರೋ ಮಿಸ್ ಯೂಸ್ ಮಾಡಿದ್ದಾರೆ. ಯಾರೂ ನನ್ನ ಹೆಸರನ್ನು ದುರ್ಬಳಕೆ ಮಾಡಬೇಡಿ ಎಂದಿದ್ದಾರೆ.
Huchaswamyvenkat96@gmail.com ಅನ್ನೋ ಮೇಲ್ ಐಡಿಯಿಂದ ಬೆದರಿಕೆ ಪತ್ರ ಬಂದಿತ್ತು. ಪೊಲೀಸರಲ್ಲೂ ಗೊಂದಲ ಮೂಡಿಸಿದೆ. ನಿನ್ನೆ ಸಂಜೆ 6:28ರ ಸುಮಾರಿಗೆ ಬಂದಿರುವ ಈ ಮೇಲ್ ಇದಾಗಿದ್ದು, ಕ್ಯಾಂಪಸ್ ಹಾಗೂ ಶಾಲೆಯಲ್ಲಿ ಬಾಂಬ್ ಇಡಲಾಗಿದ್ದು, ನಾಳೆ ಬೆಳಗ್ಗೆ 10 ಗಂಟೆಗೆ ಬ್ಲಾಸ್ಟ್ ಆಗುವ ಹಾಗೆ ಫಿಕ್ಸ್ ಮಾಡಲಾಗಿದೆ ಎಂದು ಹುಚ್ಚ ವೆಂಕಟ್ ಹೆಸರಿನಲ್ಲಿ ಕಿಡಿಗೇಡಿಗಳು ಈ-ಮೇಲ್ ಮಾಡಿದ್ದಾರೆ.
PublicNext
18/07/2022 05:28 pm