ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಿರುತೆರೆ ನಟಿ ಚೇತನಾ ಸಾವು ಕೇಸ್‌; ಪೊಲೀಸರಿಂದ ಮುಂದುವರಿದ ತನಿಖೆ

ಬೆಂಗಳೂರು: ಕಿರುತರೆ ನಟಿ ಚೇತನಾ ರಾಜ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಯಾಟ್ ಸರ್ಜರಿ ಚಿಕಿತ್ಸೆ ನೀಡಿದ್ದ ಡಾ.‌ಶೆಟ್ಟಿ ಆಸ್ಪತ್ರೆ ಬಂದ್ ಆಗಿದ್ದು, ಆಸ್ಪತ್ರೆಯ ಸಾಹೇಬ್ ಗೌಡ ಶೆಟ್ಟಿ ಸೇರಿದಂತೆ ನಾಲ್ವರ ವಿರುದ್ಧ ನೋಟೀಸ್ ಜಾರಿಗೊಳಿಸಿ ವಿಚಾರಣೆ ನೆಡೆಸಲಾಗುತ್ತಿದೆ.

ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು ವಿಚಾರಣೆ ಮುಂದುವರೆದಿದೆ. ಇನ್ನೂ ಚೇತನ ಸ್ನೇಹಿತರು ಜಿಮ್ ಟ್ರೈನರ್‌ಗಳನ್ನೂ ಸಹ ವಿಚಾರಣೆಗೆ ಒಳಪಡಿಸಿದ್ದಾರೆ. ಮೆಡಿಕಲ್ ಬೋರ್ಡ್‌ಗೂ ಸುಬ್ರಹ್ಮಣ್ಯ ನಗರ ಪೊಲೀಸರು ಮಾಹಿತಿ ನೀಡಿದ್ದಾರೆ. ಇತ್ತ ಸಾವಿನ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಆರೋಗ್ಯ ಇಲಾಖೆಯು ಡಾ.ಶೆಟ್ಟಿಗೆ ನೋಟೀಸ್ ಕೊಟ್ಟು ಆಸ್ಪತ್ರೆಯನ್ನು ಬಂದ್ ಮಾಡಿಸಿದ್ದಾರೆ.

ಇತ್ತ ಚೇತನ ಮನೆಯವರ ವಿರೋಧದ ನಡುವೆಯೂ ಫ್ಯಾಟ್ ಸರ್ಜರಿಗೆ ತನ್ನ ಮೈ ಮೇಲಿದ್ದ ಚಿನ್ನವನ್ನು ಅಡವಿಟ್ಟು ಫ್ಯಾಟ್ ಸರ್ಜರಿಗೆ ದಾಖಲಾಗಿದ್ದ ಸಂಗತಿ ಬಯಲಾಗಿದೆ.

Edited By : Manjunath H D
PublicNext

PublicNext

19/05/2022 05:59 pm

Cinque Terre

43.4 K

Cinque Terre

0

ಸಂಬಂಧಿತ ಸುದ್ದಿ